ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರತ್ತ ಆಕರ್ಷಿತರಾಗುತ್ತಿದ್ದಾರೆ ಎಂದ ಸಾಜಿದ್ ರಶೀದಿ  
ನ್ಯೂಸ್

ಹಿಂದೂ ಹುಡುಗರತ್ತ ಮುಸ್ಲಿಂ ಹುಡುಗಿಯರ ಆಕರ್ಷಣೆ ಹೆಚ್ಚಾಗ್ತಿದೆ; ಮೌಲಾನಾ ಸಾಜಿದ್ ರಶೀದಿ ಹೇಳಿದ್ದೇನು? | Maulana Sajid Rashidi

ಮುಸ್ಲಿಂ ಹುಡುಗಿಯರು ಹಿಂದೂ ಹಾಗೂ ನಾಸ್ತಿಕ ಹುಡುಗರತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಮೌಲಾನಾ ಸಾಜಿದ್ ರಶೀದಿ ಹೇಳಿರುವುದಾಗಿ ವರದಿಯಾಗಿದೆ. ಅವರ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.

New Delhi: ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಾಜಿದ್ ರಶೀದಿ ಅವರ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಹುಡುಗಿಯರು ಹಿಂದೂ ಹಾಗೂ ನಾಸ್ತಿಕ ಹುಡುಗರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಅವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ರಶೀದಿ ಅವರ ಪ್ರಕಾರ, ಮುಸ್ಲಿಂ ಹುಡುಗರು ಧರ್ಮದ ಬಗ್ಗೆ ಹೆಚ್ಚು ಮಾತನಾಡೋದ್ರಿಂದ ಹುಡುಗಿಯರು ಅವರೊಂದಿಗೆ ಮುಜುಗರದಿಂದ ಇರ್ತಾರೆ. ಹೀಗಾಗಿ ಧಾರ್ಮಿಕ ಕಟ್ಟುಪಾಡು ಕಡಿಮೆ ಇರುವ ಹಿಂದೂ ಹಾಗೂ ಇತರ ಧರ್ಮದ ಹುಡುಗರತ್ತ ಅವರು ಆಕರ್ಷಿತರಾಗ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾವಿರಾರು ಹುಡುಗಿಯರು ಮತಾಂತರ?

ಈ ಕಾರಣದಿಂದ ಸಾವಿರಾರು ಮುಸ್ಲಿಂ ಹುಡುಗಿಯರು ಇಸ್ಲಾಂ ತೊರೆದು ಹಿಂದೂ ಹುಡುಗರನ್ನು ಮದುವೆಯಾಗುವ ಮೂಲಕ ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಎಂದು ರಶೀದಿ ಹೇಳಿದ್ದಾರೆ. ಆದರೆ, ಅವರು ಉಲ್ಲೇಖಿಸಿರುವ ಈ ಸಂಖ್ಯೆಗೆ ಸ್ವತಂತ್ರ ದೃಢೀಕರಣ ಲಭ್ಯವಿಲ್ಲ.

ಅನ್ಯಧರ್ಮದವರೊಂದಿಗೆ ಮುಸ್ಲಿಂ ಹುಡುಗಿಯರ ಸ್ನೇಹ

ಅನ್ಯಧರ್ಮದ ಹುಡುಗರೊಂದಿಗೆ ಮುಸ್ಲಿಂ ಹುಡುಗಿಯರ ಸ್ನೇಹ, ಪ್ರೀತಿ ಹಾಗೂ ವಿವಾಹ ಇಸ್ಲಾಂ ಧರ್ಮದ ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ಮದುವೆಗಳು ಇಸ್ಲಾಮಿಕ್ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂಬುದು ತಮ್ಮ ನಿಲುವು ಎಂದು ರಶೀದಿ ಹೇಳಿದ್ದಾರೆ.

ಹೇಳಿಕೆ ಭಾರೀ ಚರ್ಚೆ

ರಶೀದಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಕೆಲವರು ಹೇಳಿಕೆಯನ್ನು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವನ ದೇವಸ್ಥಾನದಲ್ಲೇ ಇಬ್ಬರು ಸಾಧುಗಳ ಹತ್ಯೆ; ಮೃತದೇಹಗಳಿಗೆ ಬೆಂಕಿ, ಜಮೀನಿಗಾಗಿ ಕೃತ್ಯ? | Uttar Pradesh Murder

ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ರಶೀದಿ, ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಇತ್ತೀಚೆಗಷ್ಟೇ ಮಹಿಳೆಯರ ಸುರಕ್ಷತೆ, ವಿವಾಹ ಹಾಗೂ ಧಾರ್ಮಿಕ ಕಾನೂನುಗಳ ಬಗ್ಗೆಯೂ ಅವರು ಹೇಳಿಕೆ ನೀಡಿದ್ದರು. (ಏಜೆನ್ಸೀಸ್)