ನ್ಯೂಸ್

ಈದ್​ ಹಬ್ಬದಂದು ಮುಸ್ಲಿಂ ಬಾಲಕಿಗೆ ದುರ್ಗೆಯ ಅಲಂಕಾರ

ಕೊಲ್ಕತ್ತ: ಇಸ್ಲಾಂ ಧರ್ಮದಲ್ಲಿ ಪ್ರಮುಖವಾಗಿ ಆಚರಿಸುವ ಬಕ್ರಿದ್​ ಹಬ್ಬವು ತ್ಯಾಗ, ಬಲಿದಾನಕ್ಕೆ ಹೆಸರುವಾಸಿಯಾಗಿದ್ದು, ವ್ಯಕ್ತಿ ಪೂಜೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡುವುದಿಲ್ಲ. ಈದ್​ ಹಬ್ಬದಂದು ಮುಸ್ಲಿಂ ಬಾಲಕಿಯನ್ನು ದುರ್ಗಾ ದೇವಿಯ ರೀತಿ ಅಲಂಕರಿಸಿ, ಪೂಜಿಸಿ ಭಾವೈಕ್ಯತೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯೂ ಪಶ್ಚಿಮ ಬಂಗಾಳದರ ಕೊಲ್ಕತ್ತಾದಲ್ಲಿ ನಡೆದಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಖುತಿ ಪೂಜೆಯ ಅಂಗವಾಗಿ ರಿಮಿಶಾ ಎಂಬ ಬಾಲಕಿಗೆ ದುರ್ಗಾ ದೇವಿಯ ರೀತಿ ಅಲಂಕಾರ ಮಾಡಲಾಗಿದ್ದು, ಈದ್​-ಅಲ್-ಅಧಾ ಹಬ್ಬದ ದಿನದಂದು ನೆರವೇರಿಸಲಾಗಿದೆ. ಕೊಲ್ಕತ್ತಾದ ದುರ್ಗಾ ದೇವಿ ಪೂಜಾ ಸಮಿತಿಯೂ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಭಾವೈಕ್ಯತೆಯ ಸಂದೇಶ

ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ಬಾಲಕಿ ರಿಮಿಶಾ ಹಾಗೂ ಆಕೆಯ ತಾಯಿ ಸಂಜಿದಾ ಪೂಜೆಯಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ. ಕೊಲ್ಕತ್ತಾದ ಸಿಂಥಿ ಸರ್ಕಸ್​ ಮೈದಾನದ ಬಳಿ ಇರುವ ಕಾಶೀಶ್ವರ ಶಿವನ ದೇವಾಲಯದಲ್ಲಿ ನಡೆದಿದೆ. ಖುತಿ ಪೂಜೆಯು ಸಾಮಾನ್ಯವಾಗಿ ರಥಯಾತ್ರಯ ಸಂದರ್ಭದಲ್ಲಿ ನಡೆಯುತ್ತದೆ. ಆದರೆ, ಈದ್​ ದಿನದಂದು ಪೂಜೆ ನೆರವೇರಿಸಿರುವುದು ಎಲ್ಲರಲ್ಲೂ ಆಶ್ವರ್ಯ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾರಾನಗರ ಸ್ನೇಹ ಕೂಟದ ಸದಸ್ಯರು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಲು ಈದ್​ ದಿನದಂದು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಮನವಮಿ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ವೇಳೆ ಉಂಟಾದ ಘರ್ಷಣೆಗಳಿಂದಾಗಿ ನಮಗೆ ತೀವ್ರ ಬೇಸರವನ್ನುಂಟು ಮಾಡಿತ್ತು.

ನಾವು ಚಿಕ್ಕಂದಿನಿಂದ ಹಿಮದೂ -ಮುಸ್ಲಿಂ ಒಂದೇ ಎಂದು ಓದಿಕೊಂಡು ಬಂದಿದ್ದೇವೆ. ಎರಡು ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡಲು ಹಲವು ಬಾರಿ ಯತ್ನಿಸಲಾಗಿದೆ. ಆದ್ದರಿಮದ ನಾವು ಈದ್​ ಹಬ್ಬದ ದಿನದಂದು ಖುತಿ ಪೂಜೆಯನ್ನು ಹಮ್ಮಿಕೊಂಡು ಭಾವೈಕ್ಯತೆಯ ಸಂದೇಶವನ್ನು ಸಾರಿದ್ದೇವೆ ಎಂದು ಬಾರಾನಗರ ಸ್ನೇಹ ಕೂಟದ ಅಧ್ಯಕ್ಷ ಅಜಯ್​ ಘೋಶ್​ ತಿಳಿಸಿದ್ದಾರೆ.