ಮುಂಬೈ: ಮುಸ್ಲಿಮರ ಖಬರಸ್ತಾನ (ಸ್ಮಶಾನ)ದಲ್ಲಿ ಹಿಂದುಗಳ ಅಂತ್ಯಕ್ರಿಯೆ...ಅದೂ ಉಚಿತವಾಗಿ...!
ಇಂಥದ್ದೊಂದು ಐಕ್ಯತೆಗೆ ಉದಾಹರಣೆಯಾದ ಘಟನೆ ನಡೆಯುತ್ತಿರುವುದು ಮುಂಬೈನ ಮರೀನ್ ಲೈನ್ಸ್ನಲ್ಲಿರುವ ಮುಸ್ಲಿಮರ ಸ್ಮಶಾನದಲ್ಲಿ.
ಕಳೆದ ಮೂರು ತಿಂಗಳಿಂದ ಸುಮಾರು 253 ಹಿಂದುಗಳ ಮೃತದೇಹದ ಅಂತ್ಯಕ್ರಿಯೆನ್ನು ಸ್ಮಶಾನದ ಸಿಬ್ಬಂದಿ ನಡೆಸಿದ್ದಾರೆ. ಅದಕ್ಕಾಗಿ ಅವರು ಬಿಡಿಗಾಸು ಪಡೆದಿಲ್ಲ.
ಮರಿನ್ ಲೈನ್ಸ್ನಲ್ಲಿರುವ ಬಾಬಾ ಖಬರ್ಸ್ತಾನದ ಆಡಳಿತದಿಂದ ಆ್ಯಂಬುಲೆನ್ಸ್ ಸೇವೆ ಕೂಡ ಇದೆ. ಯಾವುದೇ ಧರ್ಮದವರೂ ಕರೆ ಮಾಡಬಹುದು.ಇವರೇ ಹೋಗಿ ಆ ಶವವನ್ನು ತಂದು, ಅಂತ್ಯಕ್ರಿಯೆ ನಡೆಸುತ್ತಾರೆ.
ಅದರಲ್ಲೂ ಕೊವಿಡ್-19 ಸಾಂಕ್ರಾಮಿಕದಿಂದಾಗಿ ಮೃತದೇಹಗಳನ್ನು ಮುಟ್ಟಲು ಕೆಲವರು ಭಯಪಡುವ ಪರಿಸ್ಥಿತಿ ಇದೆ. ಆಂಬುಲೆನ್ಸ್ ಚಾಲಕರೂ ಸಹ ಅಂಥ ರೋಗಿಗಳ ಶವ ತರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಬಾಬಾ ಖಬರ್ಸ್ತಾನ್ನ ಸಿಬ್ಬಂದಿ ಸದ್ದಿಲ್ಲದೆ ತಮ್ಮ ಒಳ್ಳೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಮನೆಯನ್ನು ಕೆಡವಿ, ಎರಡು ಕಾರನ್ನು ಧ್ವಂಸ ಮಾಡಿದ ಕಾನ್ಪುರ ಜಿಲ್ಲಾಡಳಿತ
ಅಷ್ಟಕ್ಕೂ ಇವರು ಆಂಬುಲೆನ್ಸ್ ತಂದಿದ್ದೂ ಕೂಡ ವಿಚಿತ್ರ. ಆಸ್ಪತ್ರೆಗಳು ಸರಿ ಇಲ್ಲ ಎಂದು ಬದಿಗೊತ್ತಿದ್ದ, ತುಂಬ ವರ್ಷಗಳಿಂದ ಒಂದೆಡೆ ನಿಂತಿದ್ದ ಆಂಬುಲೆನ್ಸ್ಗಳನ್ನು, ದುರಸ್ತಿ ಪಡಿಸಿಕೊಂಡು ಸೇವೆ ನೀಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ರಸ್ತೆ ಬದಿಯಲ್ಲಿ ಬಿದ್ದಿರುವ ಅನಾಥ ಶವಗಳನ್ನೂ ತಂದು ಮಣ್ಣು ಮಾಡುತ್ತಿದ್ದಾರೆ. ಬಾಬಾ ಖಬರ್ಸ್ತಾನ್ ಸ್ಮಶಾನದ ಸಿಬ್ಬಂದಿ ಸುಮಾರು 10 ತಂಡಗಳನ್ನು ರಚಿಸಿಕೊಂಡು ಈ ಕೆಲಸದಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್)