ನ್ಯೂಸ್

ದೇಸಿ ಜಿಂಗಲ್​ ಬೆಲ್​ - ಉದ್ಯಮಿ ಆನಂದ್ ಮಹಿಂದ್ರಾ ಟ್ವೀಟ್ ವೈರಲ್​

ನವದೆಹಲಿ: ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಉದ್ಯಮಿ ಆನಂದ್ ಮಹಿಂದ್ರಾ ಅವರು ಮಾಡಿದ ಟ್ವೀಟ್​ ವೈರಲ್ ಆಗಿದ್ದು, ದೇಸಿ ಜಿಂಗಲ್ ಬೆಲ್ ಸದ್ದು ಸೋಷಿಯಲ್ ಮೀಡಿಯಾದ ಗಮನಸೆಳೆದಿದೆ.

ಆನಂದ್ ಮಹಿಂದ್ರಾ ಅವರು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಐವರ ತಂಡ ಗಿಟಾರ್ ಜತೆಗೆ ಭಾರತೀಯ ಸಂಗೀತೋಪಕರಣಗಳಾದ ಸಿತಾರ್​, ಸಾರಂಗಿ, ಶೆಹನಾಯ್​, ಧೋಲ್​ ಗಳ ಮೂಲಕ ಜಿಂಗಲ್ ಬೆಲ್ ನುಡಿಸುತ್ತ ಆ ಉಪಕರಣಗಳನ್ನು ಪರಿಚಯಿಸಿದ್ದಾರೆ. ಆ ಮೂಲಕ ದೇಸಿ ಜಿಂಗಲ್​ ಬೆಲ್​ ಹಾಡು ಸದ್ದು ಮಾಡತೊಡಗಿದೆ. ಇದೇ ವಿಡಿಯೋ ಯೂಟ್ಯೂಬ್​ನ ಸಾಂತಾ ಕ್ಲಾಸ್ ಆಫ್ ಇಂಡಿಯ ಎಂಬ ಪುಟದಲ್ಲೂ ಲಭ್ಯವಿದೆ.

ಟ್ವೀಟ್​ನಲ್ಲಿರುವ 2.20 ನಿಮಿಷದ ವಿಡಿಯೋ ಈಗಾಗಲೇ 52 ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. 318 ಬಾರಿ ರೀಟ್ವೀಟ್ ಆಗಿದ್ದು, ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..