ಬೇಸರವಿಲ್ಲದಿದ್ದರೂ ದುಃಖದ ಹಾಡುಗಳಿಗೆ ಕಣ್ಣೀರಿಡೋದೇಕೆ? 
ನ್ಯೂಸ್

Music psychology: ಯಾವುದೇ ಬ್ರೇಕ್-ಅಪ್ ಆಗಿಲ್ಲ.. ಆದ್ರೂ ಸ್ಯಾಡ್ ಸಾಂಗ್ ಕೇಳಿದ್ರೆ ಕಣ್ಣೀರು ಬರುತ್ತೆ ಯಾಕೆ ಗೊತ್ತಾ?

ಯಾವುದೇ ಬ್ರೇಕ್-ಅಪ್ ಅಥವಾ ಬೇಸರವಿಲ್ಲದಿದ್ದರೂ ಸ್ಯಾಡ್ ಸಾಂಗ್ ಕೇಳಿದಾಗ ಕಣ್ಣೀರು ಬರುವುದೇಕೆ? ಇದರ ಹಿಂದಿನ ಸಹಾನುಭೂತಿ, ಹಾರ್ಮೋನ್ ಮತ್ತು ಮನೋವಿಜ್ಞಾನದ ಕಾರಣಗಳನ್ನು ಇಲ್ಲಿ ತಿಳಿಯಿರಿ.

Sad songs science: ನಮ್ಮ ಜೀವನದಲ್ಲಿ ಯಾವುದೇ ಬ್ರೇಕ್-ಅಪ್ ಆಗಿರಲಿ, ಇಲ್ಲದಿರಲಿ ಅಥವಾ ನಮಗೆ ಯಾವುದೇ ದೊಡ್ಡ ಬೇಸರ ಇಲ್ಲದಿದ್ರೂ, ಕೆಲವು ಸ್ಯಾಡ್ ಸಾಂಗ್ಸ್‌ಗಳನ್ನ ಕೇಳಿದಾಗ ಕಣ್ಣೀರು ಬಂದು ಎದೆ ಭಾರವಾದಂಗೆ ಆಗುತ್ತೆ. ಇದು ಯಾಕಾಗುತ್ತೆ ಅಂತ ಎಂದಾದ್ರು ಯೋಚನೆ ಮಾಡಿದ್ದೀರಾ? ಸೈಕಾಲಜಿ ಮತ್ತು ವಿಜ್ಞಾನದ ಪ್ರಕಾರ, ಇದು ಪ್ರತಿಯೊಬ್ಬರ ಮನಸಿನಲ್ಲಿ ನಡೆಯುವ ಸಹಜ ಪ್ರಕ್ರಿಯೆ.

ಹಾಡು ಕೇಳುವಾಗ ನಮ್ಮ ಮಿದುಳು ಮತ್ತು ಭಾವನೆಗಳ ನಡುವೆ ನಡೆಯುವ ಸಹಾನುಭೂತಿ ಹಾಗೂ ಹಾರ್ಮೋನ್‌ಗಳ ಆಟವೇ ಇದಕ್ಕೆ ಮುಖ್ಯ ಕಾರಣ. ವಿಜ್ಞಾನದ ಪ್ರಕಾರ ಇದರ ಹಿಂದಿರುವ ಪ್ರಮುಖ ಕಾರಣಗಳು ಹೀಗಿವೆ ನೋಡಿ.

1.ಅಪಾರ ಸಹಾನುಭೂತಿ ಮತ್ತು ಮಿದುಳಿನ ಸಕ್ರಿಯತೆ

ಮನುಷ್ಯರಿಗೆ ಇತರರ ನೋವನ್ನು ಗ್ರಹಿಸುವ ಮತ್ತು ಸ್ಪಂದಿಸುವ ಅದ್ಭುತ ಶಕ್ತಿ ಇದೆ. ಗಾಯಕರ ಧ್ವನಿ, ಸಾಹಿತ್ಯ ಮತ್ತು ಸಂಗೀತದಲ್ಲಿರುವ ಕರುಣಾ ರಸವನ್ನು ಕೇಳಿದಾಗ, ನಮ್ಮ ಮಿದುಳಿನಲ್ಲಿರುವ 'ಮಿರರ್ ನ್ಯೂರಾನ್‌ಗಳು' (Mirror Neurons) ಜಾಗೃತಗೊಳ್ಳುತ್ತವೆ. ಇವು ಆ ನೋವು ಸ್ವತಃ ನಮಗೇ ಆಗುತ್ತಿದೆ ಎಂಬ ಭ್ರಮೆಯನ್ನು ಮಿದುಳಿನಲ್ಲಿ ಮೂಡಿಸುತ್ತವೆ.

2.'ಪ್ರೊಲ್ಯಾಕ್ಟಿನ್' ಹಾರ್ಮೋನ್ ಬಿಡುಗಡೆ

ನಾವು ದುಃಖದ ಹಾಡನ್ನು ಕೇಳಿದಾಗ, ನಮ್ಮ ಮಿದುಳು ನಿಜವಾಗಿಯೂ ನಾವು ಸಂಕಟದಲ್ಲಿದ್ದೇವೆ ಎಂದು ಭಾವಿಸುತ್ತದೆ. ಆಗ ನಮ್ಮನ್ನು ಸಮಾಧಾನಪಡಿಸಲು ಮತ್ತು ಶಮನಗೊಳಿಸಲು 'ಪ್ರೊಲ್ಯಾಕ್ಟಿನ್' ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ಮನಸ್ಸಿಗೆ ಆಪ್ತವಾದ ಹಾಗೂ ಒಂದು ರೀತಿಯ ನೋವಿನ ಭಾವನೆಯನ್ನು ಒಟ್ಟಿಗೆ ನೀಡುತ್ತದೆ.

ಸಂಗೀತಕ್ಕೂ ಕಣ್ಣೀರಿಗೂ ಏನ್ ಕನೆಕ್ಷನ್ ಇದೆ?

3.ಸುಪ್ತ ನೆನಪುಗಳ ಜಾಗೃತಿ

ಹಾಡಿನ ಸಾಹಿತ್ಯವು ನಮ್ಮ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸದೇ ಇದ್ದರೂ, ಭೂತಕಾಲದಲ್ಲಿ ನಮಗಾದ ಸಣ್ಣಪುಟ್ಟ ಹಿನ್ನಡೆಗಳು, ಒಂಟಿತನ ಅಥವಾ ಹಳೆಯ ಘಟನೆಗಳನ್ನು ಮನಸ್ಸು ಆ ಕ್ಷಣದಲ್ಲಿ ಆ ಹಾಡಿನೊಂದಿಗೆ ಜೋಡಿಸಿಕೊಂಡು ಜಾಗೃತಗೊಳಿಸುತ್ತದೆ.

4.ಸಂಗೀತದ ಸ್ವರ ಮತ್ತು ತರಂಗಗಳ ಜಾದೂ

ಸಂಗೀತದಲ್ಲಿ ಕರಗುವಂತಹ ನಿಧಾನಗತಿಯ ಸ್ವರಗಳು (Minor Chords) ನೇರವಾಗಿ ನಮ್ಮ ಭಾವನಾತ್ಮಕ ಮಿದುಳನ್ನು ಪ್ರಚೋದಿಸುತ್ತವೆ. ಇದರಿಂದ ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೂ ಕಣ್ಣುಗಳಲ್ಲಿ ನೀರು ತಾನಾಗಿಯೇ ಹರಿದುಬರುತ್ತದೆ.

ಇದನ್ನೂ ಓದಿ: ಮಳೆ ಹೊಡೆತಕ್ಕೆ ನಲುಗಿದ ಕೊಡೈಕೆನಾಲ್: ಭೂಕುಸಿತಕ್ಕೆ ಸಿಲುಕಿ ಪ್ರವಾಸಿಗರ ಪರದಾಟ | Kodaikanal landslide

ಏನಿದು ‘ಪ್ಲೆಸೆಂಟ್ ಸ್ಯಾಡ್ನೆಸ್’?

ಈ ಇಡೀ ಪ್ರಕ್ರಿಯೆಯನ್ನು ಮನಃಶಾಸ್ತ್ರದಲ್ಲಿ ‘ಪ್ಲೆಸೆಂಟ್ ಸ್ಯಾಡ್ನೆಸ್’ (Pleasant Sadness) ಎಂದು ಕರೆಯಲಾಗುತ್ತದೆ. ಅಂದರೆ, ವಾಸ್ತವದಲ್ಲಿ ನಮಗೆ ಯಾವುದೇ ಅಪಾಯ ಅಥವಾ ದುಃಖವಿಲ್ಲದೆ, ಸಂಪೂರ್ಣ ನಿಮ್ಮದಿಯಾಗಿದ್ದುಕೊಂಡೇ ಆ ನೋವಿನ ಭಾವನೆಯನ್ನು ಅನುಭವಿಸಿ ಆನಂದಿಸುವುದಾಗಿದೆ.