ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಎ2 ಆರೋಪಿ ದರ್ಶನ್ ಜಾಮೀನು (Darshan Bail) ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಇದೀಗ ಮತ್ತೊಮ್ಮೆ ವಿಚಾರಣೆ ಮುಂದೂಡಿದ್ದು, ಅ.10ಕ್ಕೆ ಮುಂದೂಡಿದೆ.
ಆರೋಪಿ ದರ್ಶನ್ ಪರ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್, ನ್ಯಾಯಾಲಯದ ಮುಂದೆ ತಮ್ಮ ವಾದಗಳನ್ನು ಗಟ್ಟಿಯಾಗಿ ಮಂಡಿಸಿದ್ದಾರೆ. ಇತ್ತ ಪೊಲೀಸರ ಪರ ಎಸ್ಪಿಪಿ ತಮ್ಮ ವಾದಗಳನ್ನು ಮಂಡಿಸಿದ್ದು, ಯಾವುದೇ ಕಾರಣಕ್ಕೂ ದರ್ಶನ್ಗೆ ಜಾಮೀನು ಕೊಡಬಾರದು ಎಂದು ಹೇಳಿದ್ದಾರೆ.
ಇದೀಗ ನಾಳೆಗೆ (ಅ.10) ಅರ್ಜಿ ವಿಚಾರಣೆ ಮುಂದೂಡಿರುವ ಕೋರ್ಟ್, ದರ್ಶನ್ಗೆ ಜಾಮೀನು ನೀಡಲಿದೆಯೋ ಅಥವಾ ಕಠಿಣ ಶಿಕ್ಷೆ ವಿಧಿಸಲಿದೆಯೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.