ನ್ಯೂಸ್

ಕೇಂದ್ರ ಸಚಿವರ ಪುತ್ರ ಅಶಿಷ್​ ಮಿಶ್ರಾ ಮತ್ತೆ ಜೈಲಿಗೆ!

ಲಖನೌ: ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಭಾನುವಾರ ಪೊಲೀಸರಿಗೆ ಶರಣಾಗಿದ್ದಾರೆ.

ಲಖೀಂಪುರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಆಶಿಷ್​ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಕಳೆದ ವಾರ ಸುಪ್ರೀಂ ಕೋರ್ಟ್​ ನಿರಾಕರಿಸಿದ ಹಿನ್ನಲೆಯಲ್ಲಿ ಇಂದು ಪೊಲೀಸರ ಮುಂದೆ ಹಾಜರಾಗಿದ್ದರು.

ಸದ್ಯ ಲಖೀಂಪುರ ಜೈಲಿಗೆ ಅವರನ್ನು ಕಳುಹಿಸಿಕೊಡಲಾಗಿದೆ. ನಾಳೆ ಸೋಮವಾರವೇ  ಶರಣಾಗತಿಗೆ ಕೊನೇ ದಿನವಾಗಿತ್ತು. ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಜೀಪು ಹರಿಸಿದ್ದರು. ತೀವ್ರ ಗಾಯಗೊಂಡ ನಾಲ್ವರು ರೈತರು ಮೃತಪಟ್ಟಿದ್ದರು.