ನ್ಯೂಸ್

ಉದುರುವ ಕೂದಲಿಂದ ಮದುವೆಯಾಗದೇ ನೊಂದು ಮೂರು ಮಹಡಿ ಏರಿದ ಕಾನ್ಸ್​ಟೆಬಲ್​!

ಮುಂಬೈ: ಗಂಡು-ಹೆಣ್ಣಿನ ಅನುಪಾತ ಹೆಚ್ಚಿರುವ ಕಾರಣ, ಅನೇಕ ಹುಡುಗರಿಗೆ ಇಂದು ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ. ಇರುವ ಹುಡುಗಿಯರ ಡಿಮಾಂಡ್​ಗಳೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾರಣ, ಕೆಲವೊಂದು ಉದ್ಯೋಗದಲ್ಲಿ ಇರುವವರಿಗೆ ವಧು ಸಿಗುವುದೇ ಕಷ್ಟವಾಗಿದೆ.

ಇಂಥದ್ದೇ ಒಂದು ಸಮಸ್ಯೆಯಿಂದ ಬಳಲುತ್ತಿದ್ದ ಮುಂಬೈನ 30 ವರ್ಷದ ಕಾನ್‌ಸ್ಟೆಬಲ್ ಒಬ್ಬರು ಹತಾಶರಾಗಿ ಮೂರು ಅಂತಸ್ತಿನ ಕಟ್ಟಡ ಏರಿ ಸಾಯುವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಇದು ತೀರಾ ವೈಯಕ್ತಿಯ ಸಮಸ್ಯೆ ಆಗಿರುವ ಕಾರಣದಿಂದ ಅವರ ಹೆಸರನ್ನು ಪೊಲೀಸ್​ ಇಲಾಖೆ ಬಹಿರಂಗಪಡಿಸಿಲ್ಲ.

ಮುಂಬೈನ ದಾದರ್​ನಲ್ಲಿ ಇವು ವಾಸವಾಗಿದ್ದಾರೆ. ಮದುವೆಯಾಗಿ ಹಲವು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದಾರೆ. ಆದರೆ ಇದುವರೆಗೂ ಮದುವೆ ಫಿಕ್ಸ್​ ಆಗಿಲಿಲ್ಲ. ತಮ್ಮ ತಲೆಗೂಲದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಯಾವುದೇ ಹುಡುಗಿ ನನ್ನನ್ನು ಕಂಡರೆ ಮದುವೆಯಾಗಲು ಹಿಂಜರಿಯುತ್ತಾಳೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇನ್ನು ಬದುಕಿ ಪ್ರಯೋಜನ ಇಲ್ಲ ಎಂದು ಹೇಳಿದ ಕಾನ್ಸ್​ಟೆಬಲ್​ ತೀವ್ರವಾಗಿ ಮನನೊಂದು ಇಂಥ ಕೃತ್ಯಕ್ಕೆ ಇಳಿದಿದ್ದರು.

ಟೆರೇಸ್​ ಮೇಲೆ ನಿಂತು ತುದಿಯಲ್ಲಿ ಅಡ್ಡಾದಿಡ್ಡಿ ಒಡಾಡುತ್ತಿದ್ದ ಈ ಕಾನ್ಸ್​ಟೆಬಲ್​, ತಮಗೆ ಮದುವೆಗೆ ಹುಡುಗಿ ಸಿಗುತ್ತಿಲ್ಲ. ಯಾರಾದರೂ ಹುಡುಗಿ ಹುಡುಕಿ ಕೊಟ್ಟಿಲ್ಲ ಎಂದರೆ ನಾನು ಸಾಯುತ್ತೇನೆ ಎಂದು ಕೂಗಾಡುತ್ತಿದ್ದರು. ಅಲ್ಲಿನ ನಿವಾಸಿಗಳು ಅವರ ಮನವನ್ನು ಎಷ್ಟೇ ಓಲೈಸಲು ಪ್ರಯತ್ನಿಸಿದರೂ ಕಾನ್​ಸ್ಟೆಬಲ್​ ಕೆಳಕ್ಕೆ ಬರಲಿಲ್ಲ.

ನಂತರ ಅಗ್ನಿಶಾಮಕ ದಳವನ್ನು ಕರೆಸಲಾಯಿತು, ಜತೆಗೆ ಭೋವಾಡಾ ಪೊಲೀಸ್ ಅಧಿಕಾರಿಗಳು, ಮತ್ತು ಕೆಲವು ಕಾನ್‌ಸ್ಟೆಬಲ್‌ನ ಸ್ನೇಹಿತರು ಸ್ಥಳಕ್ಕೆ ಬಂದರು.

ಸುಮಾರು ಮೂರು ಗಂಟೆ ಮಾತುಕತೆ ನಡೆಸಿದರೂ ಪ್ರಯೋಜನ ಆಗಲಿಲ್ಲ. ಅದಾಗಲೇ ಕಾನ್ಸ್​ಟೆಬಲ್​ ಕೆಳಕ್ಕೆ ಜಿಗಿದರೆ, ಅಪಾಯ ಆಗದಿರಲಿ ಎಂದು ತಳಮಹಡಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಮೂರು ಗಂಟೆ ನಂತರ ಅಂತೂ ಕಾನ್​ಸ್ಟೆಬಲ್​ ಮನ ಒಲಿಸಲು ಎಲ್ಲರೂ ಯಶಸ್ವಿಯಾದರು.