Mumbai Rain : ಮುಂಬೈ ನಗರದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸ್ಥಳೀಯ ರೈಲೊಂದರ ಎಸಿ ಕೋಚ್ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ವಿಡಿಯೋವನ್ನು 'ಜೈ ಹೋ' ಎಂಬ ಬಳಕೆದಾರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಇದು ಮುಂಬೈನ ಎಸಿ ಲೋಕಲ್ ಟ್ರೈನ್. ಇದಕ್ಕೆ ನಾವು ದುಬಾರಿ ಹಣ ನೀಡುತ್ತೇವೆ" ಎಂದು ಬರೆದುಕೊಂಡು, ಮಹಾರಾಷ್ಟ್ರ ಮುಖ್ಯಂತ್ರಿ ದೇವೇಂದ್ರ ಫಡ್ನಾವೀಸ್, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ರವರ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
ಈ ಪೋಸ್ಟ್ಗೆ ರೈಲ್ವೆಸೇವಾ ಪ್ರತಿಕ್ರಿಯೆ ನೀಡಿದ್ದು, ದೂರನ್ನು ಸ್ವೀಕರಿಸಿ, ಅಗತ್ಯ ಕ್ರಮಕ್ಕಾಗಿ ಕೇಂದ್ರ ರೈಲ್ವೆಯ ಮುಂಬೈ ವಿಭಾಗಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಯಾರನ್ನೋ ಸಿಕ್ಕಿ ಹಾಕಿಸುವ ರಹಸ್ಯ ಕಾರ್ಯಸೂಚಿ ಬೇಡ: ಆರ್.ಅಶೋಕ್ ಒತ್ತಾಯ | Dharmasthala disputed cases
ಈ ಘಟನೆಯು ಮಳೆಗಾಲದಲ್ಲಿ ಮುಂಬೈನ ಉಪನಗರ ರೈಲು ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಪ್ರಯಾಣದ ಸಮಯದಲ್ಲಿ ಬೇಕಾದ ಸೌಕರ್ಯಗಳು ಇಲ್ಲದೆ ಜನರು ಓಡಾಟ ನಡೆಸುತ್ತಿರುವುದರಿಂದ ಸರ್ಕಾರ ಮೂಲಭೂತ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಜನಸಾಮಾನ್ಯರು ಟೀಕೆ ಮಾಡುತ್ತಿದ್ದಾರೆ.