ಸುಶಾಂತ್ ಸಿಂಗ್ ಸಾವಿನ ತನಿಖೆ ಮಗ್ಗಲು ಬದಲಿಸುತ್ತಿದ್ದಂತೆ, ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ರಿಯಾ ವಿರುದ್ಧ ಪಾಟ್ನಾದ ರಾಜೀವ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಸುಶಾಂತ್ ತಂದೆ ಕೆಕೆ ಸಿಂಗ್, ಕಳೆದ ನಾಲ್ಕು ತಿಂಗಳ ಹಿಂದೆಯೇ ಸುಶಾಂತ್ ಜೀವಕ್ಕೆ ಆಪತ್ತಿದೆ ಎಂದು ಮುಂಬೈನಲ್ಲಿ ದೂರು ನೀಡಿದ್ದರು. ಇದೀಗ ಅವರ ಆ ಹೇಳಿಕೆಯನ್ನು ಬಾಂದ್ರಾ ಪೊಲೀಸರು ತಳ್ಳಿ ಹಾಕಿದ್ದಾರೆ.
ಫೆಬ್ರವರಿ 25ರಂದು ಕೆಕೆ ಸಿಂಗ್, ಸುಶಾಂತ್ ಮೊದಲಿನಂತಿಲ್ಲ, ಅವನ ಜೀವಕ್ಕೆ ಆಪತ್ತು ಬಂದೊದಗಿದೆ ಎಂದು ಬಾಂದ್ರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹೇಳಿಕೆಯನ್ನು ಪರಿಶೀಲಿಸದೇ ಸುಶಾಂತ್ ಕುಟುಂಬದಿಂದ ಯಾವುದೇ ದೂರನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ.
ಈ ಸಂಬಂಧ ರಜಪೂತ್ ಕುಟುಂಬದ ಐಪಿಎಸ್ ಅಧಿಕಾರಿ ಓ.ಪಿ ಸಿಂಗ್ ಸಹ ದೂರು ನೀಡಿರುವ ಬಗ್ಗೆ ದಾಖಲಾಗಿಗಿರುವ ಒಂದಷ್ಟು ವಾಟ್ಸಾಪ್ ಮೆಸೆಜ್ಗಳನ್ನು ಮುಂಬೈ ಪೊಲೀಸರಿಗೆ ರವಾನಿಸಿದ್ದಾರೆ. ಇದರ ಮೇಲೂ, ನಮಗೆ ಸುಶಾಂತ್ಗೆ ಸಂಬಂಧಿಸಿದಂತೆ ಯಾವುದೇ ಲಿಖಿತ ದೂರು ಫೆಬ್ರವರಿ 15ರಂದು ದಾಖಲಾಗಿಲ್ಲ. (ಏಜೆನ್ಸೀಸ್)