ಮುಂಬೈ: ಹಿಂದೂ ದೇವರು, ಧರ್ಮದ ವಿಚಾರದಲ್ಲಿ ವಿಕೃತಿ ಮೆರೆಯುವ ದುರುಳರು ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಅದೇ ರೀತಿ ಮುಂಬೈನಲ್ಲೊಬ್ಬ ಮುಂಸ್ಲಿಂ ವ್ಯಾಪಾರಿ ಮೇಕೆಹೋತದ ಮೇಲೆ "ರಾಮ" ಎಂದು ಬರೆದು ಬಕ್ರೀದ್ ಸಂದರ್ಭದಲ್ಲಿ ಕಡಿಯುವವರಿಗೆ ಮಾರಾಟ ಮಾಡಲು ಯತ್ನಿಸಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ನವಿ ಮುಂಬೈ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿ ಬಂಧಿಸಿದ್ದಾರೆ.
ಈದ್ ಅಲ್-ಅಧಾ (ಬಕ್ರಿ ಈದ್) ಆಚರಣೆಗೂ ಮುನ್ನ ಹಿಂದೂ ದೇವತೆಯ ಹೆಸರನ್ನು ಹಳದಿ ಬಣ್ಣದಲ್ಲಿ ಬರೆದಿರುವ ಮೇಕೆಯನ್ನು ಮಾರಾಟ ಮಾಡಬೇಕಿತ್ತು.
ಬಿಳಿ ಮೇಕೆ ಹೋತದ ಮೈಮೇಲೆ ಹಳದಿ ಬಣ್ಣದಲ್ಲಿ "ರಾಮ" ಎಂದು ಬರೆಯಲಾಗಿತ್ತು. ಅದನ್ನು ಜಾನುವಾರು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಲು ಯತ್ನಿಸಿದ್ದ. ಆಗ ಅದನ್ನು ನೋಡಿದ ಕೆಲವರು ವೀಡಿಯೋ ಮತ್ತು ಫೋಟೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಿಧ ಹಿಂದೂ ಸಂಘಟನೆಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದವು. ಇನ್ನು ಕೆಲವರು ವ್ಯಾಪಾರಿ ವಿರುದ್ಧ ಸಿಬಿಡಿ ಬೇಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಅಪರಾಧ ಕ್ರಮಾಂಕ 123/2024 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮೇಕೆ ಮಾಲೀಕನ ಜಾಡು ಹಿಡಿದು ಹೊರಟ ಪೊಲೀಸರಿಗೆ ಅವನು ನವಿ ಮುಂಬೈನ ಸಿಬಿಡಿ ಸೆಕ್ಟರ್ ಒಂದರ ಗುಡ್ ಲಕ್ ಮಟನ್ ಶಾಪ್‌ನಲ್ಲಿ ರಾಮನ ಹೆಸರನ್ನು ಬರೆದ ಮೇಕೆಯನ್ನು ಮಾರಾಟಕ್ಕೆ ಇಡಲಾಗಿದೆ ಎಂಬುದನ್ನು ಪತ್ತೆಹಚ್ಚಿದರು. ಅಷ್ಟೇ ಅಲ್ಲಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.