ನ್ಯೂಸ್

ಲಾಭದ ಆಸೆ ತೋರಿಸಿ ವೃದ್ಧನಿಗೆ 4 ಕೋಟಿ ರೂ. ವಂಚನೆ! | Crime

Crime : ಮುಂಬೈನ ಕಂಡಿವಲಿ ನಿವಾಸಿ ಸ್ಥಳೀಯ ಡೆವಲಪರ್​ ಜಯಂತ್ ಮೆಹ್ತಾ ಪುನರಾಭಿವೃದ್ಧಿ ಯೋಜನೆಯಲ್ಲಿ 74 ವರ್ಷದ ರಿಯಲ್​ ಎಸ್ಟೇಟ್​ ಏಜೆಂಟ್​ ಒಬ್ಬರಿಗೆ 4 ಕೋಟಿ ವಂಚನೆ ಮಾಡಿರುವ ಆರೋಪ ಹಿನ್ನಲೆ, ಆತನ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏಜೆಂಟ್ ಕೊಟ್ಟ ದೂರು ಏನು?

ರಿಯಲ್ ಎಸ್ಟೇಟ್ ಏಜೆಂಟ್ ದಿನೇಶ್ ದಯಾಲಾಲ್ ವಡೋದರಿಯಾ (74) ಸಲ್ಲಿಸಿದ ದೂರಿನ ಪ್ರಕಾರ, ಆರೋಪಿ ಜಯಂತ್ ಶಿವಮಹಲ್ ಕಟ್ಟಡ, ದನ್ವಿಭವನ್ ಚಾಲ್, ಮಥುರಾದಾಸ್ ರಸ್ತೆ, ಕಂಡಿವಲಿಯ 11 ಕೊಠಡಿಗಳ ಮರು ಅಭಿವೃದ್ಧಿ ದಾಖಲೆಗಳನ್ನು ತೋರಿಸಿ ಇದಕ್ಕೆ ಹಣಕಾಸು ಒದಗಿಸಿದರೆ, ಲಾಭದಾಯಕ ಆದಾಯವನ್ನು ನೀಡುವುದಾಗಿ ಭರವಸೆ ನೀಡಿ ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಜಯಂತ್​ ಮಾತು ನಂಬಿದ್ದ ಸಂತ್ರಸ್ತ ವಡೋದರಿಯಾ 2.89 ಕೋಟಿ ರೂಪಾಯಿ ನಗದು ಮತ್ತು 1.18 ಕೋಟಿ ರೂಗಳ ಚೆಕ್ ಮೂಲಕ ಹಣವನ್ನು ನೀಡಿದ್ದಾರೆ. ಆದರೆ, ಪುನರಾಭಿವೃದ್ಧಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ ಹಾಗೂ ದೂರುದಾರನಿಗೆ ಯಾವುದೇ ರಿಟರ್ನ್​ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಂಚನೆ ಸ್ಥಳ ಮತ್ತು ತನಿಖೆ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದು, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)