ನವದೆಹಲಿ: ಮಧ್ಯಪ್ರಾಚ್ಯ ಸೇರಿದಂತೆ ಪ್ರಾದೇಶಿಕ ಬಿಕ್ಕಟ್ಟುಗಳ ಪರಿಹಾರದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿರುವಂತೆಯೇ ಅನುಭವಿ ರಾಜತಾಂತ್ರಿಕ ಮುಕ್ತೇಶ್ ಕುಮಾರ್ ಪರದೇಶಿ (MukteshKumarPardeshi) ಅವರನ್ನು ಟರ್ಕಿಯ (Turkiye) ಭಾರತದ (India) ನೂತನ ರಾಯಭಾರಿಯಾಗಿ ನೇಮಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನ ಹೋಲಿಕೆ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ | Karnataka HC judge
1991ರ ಬ್ಯಾಚ್‌ನ ಐಎಫ್ಎಸ್ ಅಧಿಕಾರಿ ಮುಕ್ತೇಶ್ ಕುಮಾರ್ ಪರದೇಶಿ, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರು ಶೀಘ್ರವೇ ತಮಗೆ ವಹಿಸಿದ ಕೆಲಸ ನಿರ್ವಹಿಸಲಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಮುಕ್ತೇಶ್ ಅವರು ಕಳೆದ ವರ್ಷ ನಡೆದ ಜಿ20 ಶೃಂಗಸಭೆ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಉನ್ನತ ಅಧಿಕಾರಿಗಳ ಗುಂಪಿನ ತಂಡದ ಮುಖ್ಯ ಸದಸ್ಯರಾಗಿದ್ದರು. ವೀರೇಂದರ್ ಪೌಲ್ ಅವರ ಧೀಘ್ರ ಕಾಲದ ಅನಾರೋಗ್ಯದಿಂದ ಟರ್ಕಿ ರಾಯಭಾರಿ ಹುದ್ದೆ ಖಾಲಿಯಾಗಿತ್ತು.
ಜುಲೈ 2019 ರಿಂದ ಜುಲೈ 2022 ರವರೆಗೆ ಅವರು ನ್ಯೂಜಿಲೆಂಡ್‌ಗೆ ಭಾರತದ ಹೈಕಮಿಷನರ್ ಆಗಿದ್ದರು. ಪರದೇಶಿ ಅವರು ಸಮೋವಾ, ವನವಾಟು, ನಿಯು ಮತ್ತು ಕುಕ್ ದ್ವೀಪಗಳಿಗೂ ಏಕಕಾಲದಲ್ಲಿ ಹೈಕಮಿಷನರ್ ಆಗಿದ್ದರು. ಏಪ್ರಿಲ್ 2016 ರಿಂದ ಜೂನ್ 2019 ರವರೆಗೆ ಮೆಕ್ಸಿಕೋಗೂ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
ದೆಹಲಿಯಲ್ಲಿರುವ MEA ನ ಪ್ರಧಾನ ಕಛೇರಿಯಲ್ಲಿ, 2010-16ರಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಮುಖ್ಯ ಪಾಸ್‌ಪೋರ್ಟ್ ಅಧಿಕಾರಿಯಾಗಿ ಸೇವೆ ಸೇವೆ ಸಲ್ಲಿಸಿದ್ದರು.