ಮುಂಬೈ: ಮುಕೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಕಂಪನಿ ದೊಡ್ಡ ಡೀಲ್ ಮಾಡಿದೆ. ರಿಲಯನ್ಸ್ ರಿಟೇಲ್ ಕಂಪನಿಯು 82 ವರ್ಷದ ರಾವಲ್‌ಗಾಂವ್ ಶುಗರ್ ಫಾಮ್ ಲಿಮಿಟೆಡ್ ಕಂಪನಿಯ ಕ್ಯಾಂಡಿ ಬ್ರಾಂಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ರಾವಲ್‌ಗಾಂವ್ ಶುಗರ್ ಫಾರ್ಮ್ ಬಳಿ ಮ್ಯಾಂಗೊ ಮೂಡ್, ಕಾಫಿ ಬ್ರೇಕ್, ಟುಟ್ಟಿ ಫ್ರುಟಿ, ಪಾನ್ ಪಸಂದ್, ಚೋಕೋ ಕ್ರೀಮ್ ಮತ್ತು ಸುಪ್ರೀಂ ರೀತಿಯ ಬ್ರ್ಯಾಂಡ್‌ಗಳಿವೆ. ಈಗ ಈ ಕಂಪನಿಯೊಂದಿಗಿನ ಒಪ್ಪಂದದ ಅಡಿಯಲ್ಲಿ, ಈ ಉತ್ಪನ್ನಗಳ ಟ್ರೇಡ್‌ಮಾರ್ಕ್‌ಗಳು, ಉತ್ಪಾದನಾ ಸೂಚನೆಗಳು ಮತ್ತು ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಿಲಯನ್ಸ್ ರಿಟೇಲ್ಗೆ ವರ್ಗಾಯಿಸಲಾಗುತ್ತದೆ.
ಈ ಬ್ರ್ಯಾಂಡ್‌ಗಳ ಟ್ರೇಡ್‌ಮಾರ್ಕ್‌ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಮಾರಾಟವನ್ನು ಅದರ ನಿರ್ದೇಶಕ ಮಂಡಳಿಯು ಅನುಮೋದಿಸಿದೆ ಎಂದು ರಾವಲ್‌ಗಾಂವ್ ಶುಗರ್ ಫಾರ್ಮ್ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ ರಿಲಯನ್ಸ್ ಕನ್ಸ್ಯೂಮರ್, ಇದು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಘಟಕವಾಗಿದೆ. ಈ ಕಂಪನಿಯು ಇತ್ತೀಚೆಗೆ ಸ್ವದೇಶಿ ಸಾಫ್ಟ್ ಡ್ರಿಂಕ್ ಬ್ರ್ಯಾಂಡ್ ಕ್ಯಾಂಪಾ ಕೋಲಾವನ್ನು ಸ್ವಾಧೀನಪಡಿಸಿಕೊಂಡಿದೆ.
ರಾವಲ್‌ಗಾಂವ್ ಶುಗರ್ ಫಾರ್ಮ್ ಸಂಬಂಧಿತ 27 ಕೋಟಿ ರೂ. ಮೌಲ್ಯದ ಈ ಡೀಲ್‌ನಲ್ಲಿ ಆರ್‌ಸಿಪಿಎಲ್ ಅನ್ನು ವರ್ಗಾಯಿಸಲು ಅನುಮೋದನೆ ನೀಡಲಾಗಿದೆ. ಆದರೆ, ಉದ್ದೇಶಿತ ಒಪ್ಪಂದದ ನಂತರವೂ ಆಸ್ತಿ, ಭೂಮಿ,ಸ್ಥಾವರ, ಕಟ್ಟಡ, ಉಪಕರಣ, ಯಂತ್ರೋಪಕರಣಗಳಂತಹ ಇತರ ಎಲ್ಲ ಆಸ್ತಿಗಳು ತನ್ನ ಬಳಿಯೇ ಉಳಿಯುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅದರ ಮಿಠಾಯಿ ಎಂದು ರಾವಲ್‌ಗಾಂವ್ ಶುಗರ್ ಕಂಪನಿ ಹೇಳಿದೆ.
ವ್ಯಾಪಾರ ನಿರ್ವಹಣೆ ಕಷ್ಟವಾಗುತ್ತಿದೆ. ಸಂಘಟಿತ ಮತ್ತು ಅಸಂಘಟಿತ ಆಟಗಾರರಿಂದ ಹೆಚ್ಚಿದ ಸ್ಪರ್ಧೆಯಿಂದಾಗಿ ಇದು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ ಎಂದು ಕಂಪನಿ ಹೇಳಿದೆ.