More

    ಅಗ್ಗದ ಬೆಲೆಗೆ ಚಿನ್ನ ಮಾರುತ್ತಿದೆ ಆರ್‌ಬಿಐ: ಫೆ. 12ರಿಂದ ಖರೀದಿ ಆರಂಭ, 5 ದಿನಗಳವರೆಗೆ ಅವಕಾಶ

    ಮುಂಬೈ: ಸೋಮವಾರದಿಂದ ಐದು ದಿನಗಳವರೆಗೆ ಸಾವರಿನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಖರೀದಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರ್‌ಬಿಐ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಈ ಕಂತಿನ ಚಿನ್ನದ ಬಾಂಡ್‌ನ ಚಂದಾ ದರವನ್ನು ಪ್ರತಿ ಗ್ರಾಂಗೆ 6,263 ರೂ.ಗೆ ನಿಗದಿಪಡಿಸಲಾಗಿದ್ದು, ಇದು ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಇದೆ.

    ಸಾವರಿನ್ ಗೋಲ್ಡ್ ಬಾಂಡ್ (SGB) ಸ್ಕೀಮ್ 2023-24 ಸರಣಿ ನಾಲ್ಕರ ಯೋಜನೆಯು ಈ ತಿಂಗಳ 12 ರಿಂದ 16 ರವರೆಗೆ ತೆರೆದಿರುತ್ತದೆ. ಈ ಬಾಂಡ್‌ನ ಮೌಲ್ಯ ಪ್ರತಿ ಗ್ರಾಂಗೆ 6,263 ರೂಪಾಯಿ ಇದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೂಲಕ ಪಾವತಿ ಮಾಡುವ ಹೂಡಿಕೆದಾರರಿಗೆ ಭಾರತ ಸರ್ಕಾರವು ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿಯನ್ನು ಕೂಡ ನೀಡುತ್ತಿದೆ. ಇಂತಹ ಹೂಡಿಕೆದಾರರಿಗೆ ಚಿನ್ನದ ಬಾಂಡ್‌ಗಳ ವಿತರಣೆಯ ಬೆಲೆ 6,213 ರೂ ಆಗಿರುತ್ತದೆ ಎಂದು ಆರ್‌ಬಿಐ ಹೇಳಿದೆ.

    SGB ​​ಗಳನ್ನು ನಿಗದಿತ ವಾಣಿಜ್ಯ ಬ್ಯಾಂಕ್‌ಗಳು, (ಸಣ್ಣ ಹಣಕಾಸು ಬ್ಯಾಂಕ್‌ಗಳು, ಪಾವತಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಸೆಟಲ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಇಂಡಿಯಾ ಲಿಮಿಟೆಡ್. ಮತ್ತು ಬಿಎಸ್​ಇ ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುವುದು.

    ಕೇಂದ್ರ ಬ್ಯಾಂಕ್ ಆಗಿರುವ ಆರ್​ಬಿಐ ವಾಸ್ತವವಾಗಿ ಭಾರತ ಸರ್ಕಾರದ ಪರವಾಗಿ ಚಿನ್ನದ ಬಾಂಡ್‌ಗಳನ್ನು ನೀಡುತ್ತದೆ. ಭಾರತದ ನಾಗರಿಕರು, ಹಿಂದೂ ಅವಿಭಜಿತ ಕುಟುಂಬಗಳು (HUF), ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಬಹುದು. ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗಳಿಗೆ ನಾಲ್ಕು ಕಿಲೋ ಗ್ರಾಂಗಳು, HUF ಗಳಿಗೆ ನಾಲ್ಕು ಕಿಲೋ ಗ್ರಾಂಗಳು ಮತ್ತು ಟ್ರಸ್ಟ್‌ಗಳಿಗೆ ನಾಲ್ಕು ಕಿಲೋ ಗ್ರಾಂಗಳು ಇದೆ.

    ಇದೇ ರೀತಿಯ ಸಂಸ್ಥೆಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 20 ಕೆ.ಜಿ. ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನವೆಂಬರ್ 2015 ರಲ್ಲಿ ಮೊದಲ ಚಿನ್ನದ ಬಾಂಡ್ ಯೋಜನೆಯನ್ನು ಪರಿಚಯಿಸಲಾಯಿತು.

    ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ 2024ರಲ್ಲಿ ಕಂತಿನ ಚಿನ್ನದ ಬಾಂಡ್‌ನ ಚಂದಾ ದರವನ್ನು ಪ್ರತಿ ಗ್ರಾಂಗೆ 6,263 ರೂ.ಗೆ ನಿಗದಿಪಡಿಸಲಾಗಿದೆ. ಸಾವರಿನ್ ಗೋಲ್ಡ್ ಬಾಂಡ್ ಆದಾಯ ಕೂಡ ಆಕರ್ಷಕವಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಅದರ ಮೇಲೆ ಬಾಜಿ ಕಟ್ಟಲು ಬಯಸುತ್ತಾರೆ. ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2023-24 ಸರಣಿ ನಾಲ್ಕು ಈ ತಿಂಗಳ 12 ರಿಂದ 16 ರವರೆಗೆ ತೆರೆದಿರುತ್ತದೆ.

    ರೂ. 2 ಲಕ್ಷ ಹೂಡಿಕೆಯಾಯ್ತು 1 ಕೋಟಿ: 5200% ಲಾಭ ನೀಡಿದ ಮಲ್ಟಿಬ್ಯಾಗರ್​ ಷೇರಿಗೆ ಈಗಲೂ ಬೇಡಿಕೆ

    ಉಚಿತ ವಿದ್ಯುತ್​ ಸುರ್ಯೋದಯ ಯೋಜನೆಗೆ ಮನೆ ಮೇಲ್ಛಾವಣಿ ಜಾಗ ಎಷ್ಟಿರಬೇಕು? ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts