ಧಾನ್ಯಗಳ ಸಂಗ್ರಹದಲ್ಲಿ ಆಹಾರ ಇಲಾಖೆ ದಾಖಲೆ 
ನ್ಯೂಸ್

ಎಂಎಸ್‌ಪಿ ಯೋಜನೆ: ರಾಗಿ ಖರೀದಿಯಲ್ಲಿ ತುಮಕೂರು ಪ್ರಥಮ, ಹಾಸನ ದ್ವಿತೀಯ ಸ್ಥಾನ- MSP Scheme

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಹಳೆಯ ಮೈಸೂರು ಭಾಗದ ರೈತರು ಅಧಿಕವಾಗಿ ರಾಗಿ ಬೆಳೆಯುತ್ತಿದ್ದಾರೆ. ಎಂಎಸ್‌ಪಿ ಯೋಜನೆಯಡಿ ನಿಗಮವು, ರಾಜ್ಯದ ಇತರ ಜಿಲ್ಲೆಗಳಗಿಂತ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 1,23,250 ಮೆ.ಟನ್ ರಾಗಿ ಖರೀದಿಸಿದೆ.ಹಾಸನ 1,03,609, ಮೈಸೂರು 59,809, ಚಿಕ್ಕಮಗಳೂರು 48,869, ಮಂಡ್ಯ 44,548 ಮತ್ತು ಬೆಂ.ಗ್ರಾಮಾಂತರ 42,806 ಮೆ.ಟನ್ ರಾಗಿ ಖರೀದಿ ಪ್ರಕ್ರಿಯೆ ನಡೆದಿದೆ.

ಬೆಂಗಳೂರು: (MSP Scheme) ಆಹಾರ ಇಲಾಖೆ ಅಧೀನದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2025 - 26ರಲ್ಲಿ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ಆಹಾರ ಧಾನ್ಯಗಳ ಖರೀದಿಯಲ್ಲಿ ದಾಖಲೆ ನಿರ್ಮಿಸಿದೆ.

ಕಳೆದ ವರ್ಷದಲ್ಲಿ 2,46,605 ರೈತರಿಂದ 5,69,331 ಮೆಟ್ರಿಕ್ ಟನ್ ರಾಗಿ, 40,845 ರೈತರಿಂದ 2,21,750 ಮೆ.ಟನ್ ಬಿಳಿಜೋಳ ಹಾಗೂ 1,696 ರೈತರಿಂದ 5,677 ಮೆ.ಟನ್ ಭತ್ತ ಖರೀದಿಯಾಗಿದ್ದು, ಇದು ಹೊಸ ದಾಖಲೆಯಾಗಿದೆ. 2020- 21ರಲ್ಲಿ 4.753 ಲಕ್ಷ ಮೆ.ಟನ್ ರಾಗಿ ಮತ್ತು 2024-25ರಲ್ಲಿ 1.941 ಲಕ್ಷ ಮೆ.ಟನ್ ಬಿಳಿ ಜೋಳ ಖರೀದಿಯಾಗಿತ್ತು.

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಹಳೆಯ ಮೈಸೂರು ಭಾಗದ ರೈತರು ಅಧಿಕವಾಗಿ ರಾಗಿ ಬೆಳೆಯುತ್ತಿದ್ದಾರೆ. ಎಂಎಸ್‌ಪಿ ಯೋಜನೆಯಡಿ ನಿಗಮವು, ರಾಜ್ಯದ ಇತರ ಜಿಲ್ಲೆಗಳಗಿಂತ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 1,23,250 ಮೆ.ಟನ್ ರಾಗಿ ಖರೀದಿಸಿದೆ.ಹಾಸನ 1,03,609, ಮೈಸೂರು 59,809, ಚಿಕ್ಕಮಗಳೂರು 48,869, ಮಂಡ್ಯ 44,548 ಮತ್ತು ಬೆಂ.ಗ್ರಾಮಾಂತರ 42,806 ಮೆ.ಟನ್ ರಾಗಿ ಖರೀದಿ ಪ್ರಕ್ರಿಯೆ ನಡೆದಿದೆ.

ಇನ್ನೂ ಬಿಳಿಜೋಳ ಖರೀದಿಯಲ್ಲಿ ರಾಯಚೂರು 1.26 ಲಕ್ಷ ಮೆ.ಟನ್, ಬಳ್ಳಾರಿ 75,266 ಮೆ. ಟನ್ ಮತ್ತು ವಿಜಯನಗರ 12,711 ಮೆ.ಟನ್ ಹಾಗೂ ಹಾವೇರಿ 5661 ಮೆ.ಟನ್ ಖರೀದಿ ಪ್ರಕ್ರಿಯೆಯಾಗಿದೆ. ಭತ್ತ ಖರೀದಿಯಲ್ಲಿ ಮೈಸೂರು(2,498 ಮೆ.ಟನ್) ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ (1,337 ಮೆ.ಟನ್) 2ನೇ ಸ್ಥಾನ ಮತ್ತು ಹಾವೇರಿ ( 1,115 ಮೆ.ಟನ್) 3ನೇ ಸ್ಥಾನದಲ್ಲಿದೆ. 2025-26ರ ಖಾರ್ಿ ಮಾರಾಟ ಋತುವಿನಲ್ಲಿ ಸಿರಿಧಾನ್ಯ, ಕಿರುಧಾನ್ಯ ಸಂಗ್ರಹಣೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಕೇಂದ್ರ ಆಹಾರ ಇಲಾಖೆ, ಕಳೆದ ತಿಂಗಳು ರಾಜ್ಯ ಆಹಾರ ಇಲಾಖೆಗೆ ‘ಶ್ರೀ ಅನ್ನ ಸಂಗ್ರಹಣೆ ಶ್ರೇಷ್ಠತೆ ಪ್ರಶಸ್ತಿ ಕೊಟ್ಟಿತ್ತು.

79,48,674 ಕ್ವಿಂಟಲ್ ಆಹಾರ ಧಾನ್ಯ ಸಂಗ್ರಹ:

ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿಸಿ ಪ್ಯಾಕಿಂಗ್ ಮತ್ತು ಸಾಗಣೆಗೆ ಈವರೆಗೆ 1,58,97,348 ಗೋಣಿ ಚೀಲಗಳು ಬಳಕೆಯಾಗಿವೆ. 2026ರ ಆ.24ವರೆಗೆ ಒಟ್ಟು 79,48,674 ಕ್ವಿಂಟಲ್ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ.ಗೋಣಿ ಚೀಲ ಕೊರತೆಯಾಗದಂತೆ ನಿಗಮವು ಪ್ರಸ್ತುತ ಋತುವಿನಲ್ಲಿ ಒಟ್ಟು 1.53 ಕೋಟಿ ಚೀಲಗಳನ್ನು ಈಗಾಗಲೇ ವಿವಿಧ ಜಿಲ್ಲೆಗಳಿಗೆ ಪೂರೈಸಿದೆ.ಕೇಂದ್ರ ಸರ್ಕಾರವು ಈ ಯೋಜನೆಯಡಿ ಉಚಿತವಾಗಿ ರೈತರಿಗೆ ಗೋಣಿ ಚೀಲ ನೀಡುತ್ತಿದೆ. ರಾಗಿ, ಭತ್ತ ಮತ್ತು ಜೋಳ ಮಾರಾಟ ಮಾಡುವ ರೈತರು, ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಣಿ ಚೀಲ ಅಥವಾ ಅದಕ್ಕೆ ಹಣ ಪಡೆಯಬಹುದು. ಒಂದು ವೇಳೆ ಅಧಿಕಾರಿಗಳು ನೀಡದಿದ್ದರೆ ಸಂಬಂಧಪಟ್ಟ ಮೇಧಿಕಾರಿಗಳಿಗೆ ದೂರು ನೀಡಬಹುದು.

ಏನಿದು ನಿಗಮ?

ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ರೇಷನ್ ವಿತರಿಸಲು ಆಹಾರ ಧಾನ್ಯಗಳನ್ನು ಖರೀದಿಸಿ, ಸಂಗ್ರಹಿಸಿ ಮತ್ತು ವಿತರಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಎಂಎಸ್‌ಪಿ ಕಾರ್ಯಾಚರಣೆಗಳ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯಾದ್ಯಂತ 223 ಸಗಟು ಮಳಿಗೆಗಳನ್ನು ನಿಗಮ ಹೊಂದಿದೆ.

ಎಂಎಸ್‌ಪಿ ದರ ವಿವರ

ಆಹಾರ ಧಾನ್ಯ ನಿಗದಿಪಡಿಸಿದ ದರ (ಪ್ರತಿ ಕ್ವಿಂಟಾಲ್‌ಗೆ)

ರಾಗಿ 4,886

ಬಿಳಿಜೋಳ 3,699

ಭತ್ತ 2,369