"ನೆಗೆಟಿವ್ ಪಾತ್ರದಲ್ಲೂ ಮನಗೆಲ್ಲೋದು ಯಶ್ ಮಾತ್ರ!": 'ರಾಮಾಯಣ'ದ ರಾವಣನ ಬಗ್ಗೆ 'ಸೀತೆ' ಸಾಯಿ ಹೇಳಿದ್ದೇನು? Sai Pallavi

₹4,000 ಕೋಟಿ ವೆಚ್ಚದ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಯಶ್ ಪಾತ್ರದ ಬಗ್ಗೆ ಸೀತೆ ಪಾತ್ರಧಾರಿ ಸಾಯಿ ಪಲ್ಲವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ; ಚಿತ್ರ ದೀಪಾವಳಿಗೆ ತೆರೆಗೆ ಬರಲಿದೆ.
During the promotions for the highly anticipated film 'Ramayana'—made on a budget of ₹4,000 crore—actress Sai Pallavi praised Rocking Star Yash's portrayal of the character Ravana.
₹4,000 ಕೋಟಿ ವೆಚ್ಚದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಪ್ರಚಾರದ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ ರಾವಣನ ಪಾತ್ರವನ್ನು ಕೊಂಡಾಡಿದ ನಟಿ ಸಾಯಿ ಪಲ್ಲವಿ.
Published on: 

ಮುಂಬೈ: ನವೆಂಬರ್​ 5, 2026 ರಂದು ಭಾರತೀಯ ಚಿತ್ರೋಧ್ಯಮದ ಮಟ್ಟಿಗೆ ಐತಿಹಾಸಿಕ ದಿನವಾಗಲಿದೆ. ಭರ್ತಿ 4000 ಕೋಟಿ ಬಂಡವಾಳವನ್ನು ಹೂಡಿ, ನಮಿತ್​​ ಮಲೋತ್ರಾ ಈ ದೇಶದ ಮಣ್ಣಿನ ಕತೆಯಾದ 'ರಾಮಾಯಣ' ವನ್ನು ವಿಶ್ವಕ್ಕೆ ಹೇಳಹೊರಟಿದ್ದಾರೆ.

ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗವು 2027 ರ ದೀಪಾವಳಿಗೆ ತೆರೆಕಾಣಲಿದೆ. ಈಗ ಈ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ, ಸಿನಿತಂಡ, ಸಿನಿಮಾದ ಭರ್ಜರಿ ಪ್ರಚಾರ ನಡೆಸುತ್ತಿದೆ.

ರಾವಣನಾಗಿ ಮನಗೆದ್ದವರು ಯಶ್​ ಮಾತ್ರ!

ಈ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾ ಮಾತೆ ಪಾತ್ರಧಾರಿ ಸಾಯಿ ಪಲ್ಲವಿ, ರಾಕಿಂಗ್​ ಸ್ಟಾರ್​ ಯಶ್​ ಬಗ್ಗೆ ಮಾತನಾಡುತ್ತಾ, ಇವರು ಕೆಜಿಎಫ್​ ಮೂಲಕ ಇಡೀ ದೇಶಕ್ಕೆ ಪರಿಚಿತರಾದರೂ, ಟಾಕ್ಸಿಕ್​ ಮೂಲಕ ಇನ್ನಷ್ಟು ಖ್ಯಾತಿಗಳಿಸಿದರು. ಈಗ ಈ ಐತಿಹಾಸಿಕ ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಇವರು ಪ್ರಪಂಚದ ಪ್ರೇಕ್ಷಕರ ಮನವನ್ನು ಮುಟ್ಟಲಿದ್ದಾರೆಂದು ನಟಿ ಹೇಳಿದ್ದಾರೆ.

ಸಾಮಾನ್ಯವಾಗಿ ಸಿನಿಮಾದ ನಾಯಕನಟರು, ಹೀರೋ ಪಾತ್ರಧಾರಿಗಳು, ಜನರಿಗೆ ಇಷ್ಟವಾಗುತ್ತಾರೆ. ಆದರೆ, ರಾಮಾಯಣದಲ್ಲಿ ರಾವಣನ ಪಾತ್ರ ಒಬ್ಬ ದುಷ್ಟನ ಪಾತ್ರವಾಗಿದೆ. ಆದರೆ ಈ ಪಾತ್ರವನ್ನು ಯಶ್​ ಅವರು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ, ನೆಗೆಟಿವ್​ ಪಾತ್ರವನ್ನು ಮಾಡಿದರೂ ಜನರ ಮನಸ್ಸನ್ನು ಗೆಲ್ಲಲು ಯಶ್​ ಅವರಲ್ಲಿ ಮಾತ್ರ ಸಾಧ್ಯವೆಂದು ನಾನು ಹೇಳಬಲ್ಲೆ ಎಂದು ಸಾಯಿ ಪಲ್ಲವಿ ನುಡಿದಿದ್ದಾರೆ.

ನಾನೇಕೆ ರಾವಣನನ್ನು ಆರಿಸಿಕೊಂಡೆ?

ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಯಶ್​ ತಾವೇಕೆ ರಾಮಾಯಣದಲ್ಲಿ ರಾವಣದ ಪಾತ್ರವನ್ನು ಮಾಡಲು ಒಪ್ಪಿಕೊಂಡರೆಂದು ಹೇಳಿದ್ದರು. ರಾಮ, ರಾಮಾಯಣದ ನಾಯಕ ಎನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ರಾವಣದ ಕೆಟ್ಟತನವನ್ನು ಜನರಿಗೆ ತೋರಿಸಿದಾಗ ಮಾತ್ರ ರಾಮನ ಒಳ್ಳೆಯತನ ಜನರ ಮನಮುಟ್ಟುತ್ತದೆ.

ನಾನು ರಾವಣನ ಪಾತ್ರವನ್ನು ಮಾಡಲು ಒಪ್ಪಿಕೊಂಡಾಗಲೇ, ನಿರ್ಧರಿಸಿದ್ದೆ, ನಾನು ಈ ಪಾತ್ರವನ್ನು ಹೇಗೆ ಮಾಡಬೇಕೆಂದರೆ, ಇನ್ಯಾರು ಈ ಪಾತ್ರವನ್ನು ನಾನು ಮಾಡಿದ ರೀತಿಯಲ್ಲಿ ಮಾಡಿರಲೇಬಾರದು, ಮುಂದೆಯೂ ಮಾಡಬಾರದು. ನನ್ನ ಪಾತ್ರವನ್ನು ನೋಡಿದ ಪ್ರತಿಯೊಬ್ಬರಲ್ಲೂ ಇವನನ್ನು ಹೇಗೆ ಕೊಲ್ಲಲಿ ಎಂಬ ಭಾವನೆ ಮೂಡಬೇಕು. ಆ ರೀತಿಯಲ್ಲಿ ನಾನು ಪಾತ್ರವನ್ನು ನಿರ್ವಹಿಸಬೇಕೆಂದು ನಿರ್ಧರಿಸಿದ್ದಾಗಿ ಯಶ್​ ಹೇಳಿದ್ದರು.

Also Read
"ಅರುಣಾಚಲದಲ್ಲಿ ಚೀನಾ ಗಡಿ ಕ್ಯಾತೆ ಇನ್ನೂ ಮುಗಿದಿಲ್ಲ" ITBP ಮುಖ್ಯಸ್ಥರ ಹೇಳಿಕೆ ವೈರಲ್​: ಪ್ರಧಾನಿ ವಿರುದ್ಧ ಜೈರಾಮ್​ ರಮೇಶ್​ ವಾಗ್ದಾಳಿ! India China Faceoff
During the promotions for the highly anticipated film 'Ramayana'—made on a budget of ₹4,000 crore—actress Sai Pallavi praised Rocking Star Yash's portrayal of the character Ravana.

ದೀಪಾವಳಿಗೆ ರಾಮಾಯಣ!

ನಮಿತ್​ ಮಲೋತ್ರಾ ನಿರ್ಮಾಣದ, ಮನೋಜ್​ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ರಾಮಾಯಣ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿ ಎಂದು ಸಿನಿ ತಂಡ ಈಗಾಗಲೇ ತಿಳಿಸಿದೆ. 2026 ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ತೆರೆಕಂಡರೆ, 2027 ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ಕಾಣಿಸಿಕೊಂಡರೆ, ರಾವಣನಾಗಿ ಯಶ್​, ಸೀತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್​ ಮಿಂಚಲಿದ್ದಾರೆ. ಇವರು ಜೊತೆ ಪ್ರತಿಯೊಂದು ಪಾತ್ರದಲ್ಲಿ ಖ್ಯಾತನಾಮರೇ ಅಭಿನಯಿಸಲಿದ್ದು, ಈ ಸಿನಿಮಾದ ಬಜೆಟ್​ ಸುಮಾರು 4,000 ಕೋಟಿ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net