"ಅರುಣಾಚಲದಲ್ಲಿ ಚೀನಾ ಗಡಿ ಕ್ಯಾತೆ ಇನ್ನೂ ಮುಗಿದಿಲ್ಲ" ITBP ಮುಖ್ಯಸ್ಥರ ಹೇಳಿಕೆ ವೈರಲ್​: ಪ್ರಧಾನಿ ವಿರುದ್ಧ ಜೈರಾಮ್​ ರಮೇಶ್​ ವಾಗ್ದಾಳಿ! India China Faceoff

ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಮುಂದುವರಿದಿದೆ ಎಂದ ITBP ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ, ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ITBP Director General speaks on the LAC border situation at the 'Himaveera Samman' ceremony in Alwar, Rajasthan; Congress leader Jairam Ramesh criticizes the Central Government's border policy.
ರಾಜಸ್ಥಾನದ ಅಲ್ವರ್‌ನಲ್ಲಿ ನಡೆದ ಹಿಮವೀರ ಸಮ್ಮಾನ್ ಸಮಾರಂಭದಲ್ಲಿ LAC ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ITBP ಮಹಾನಿರ್ದೇಶಕರು / ಕೇಂದ್ರ ಸರ್ಕಾರದ ಗಡಿ ನೀತಿಯನ್ನು ಟೀಕಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್.
Published on: 

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿವಿವಾದ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಉಭಯ ದೇಶಗಳ ನಡುವೆ ಗಡಿವಿವಾದ ಕೇಂದ್ರವಾಗಿರುವ ಅರುಣಾಚಲ ಪ್ರದೇಶದಲ್ಲಿ, ಹಲವು ಬಾರಿ ಚೀನಿ ಸೈನಿಕರು ಹಾಗೂ ಭಾರತೀಯ ಸೈನಿಕರ ನಡುವೆ ಮುಖಾಮುಖಿ ಘಟನೆಗಳು ನಡೆದಿದೆ, ಹಾಗೂ ಇಂದಿಗೂ ಇದು ಮುಂದುವರಿದಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ನೀಡಿರುವ ಹೇಳಿಕೆ ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಐಟಿಬಿಪಿ ಮುಖ್ಯಸ್ಥರ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್​ ಪಕ್ಷ, ಚೀನಾ ನಮ್ಮ ದೇಶದ ಮೇಲೆ ದಾಳಿ ಮಾಡಲು ಮುಂದಾಗುತ್ತಿದೆಯಾದರೂ ಕೇಂದ್ರ ಸರ್ಕಾರ ಈ ಬಗ್ಗೆ ಮೌನಕ್ಕೆ ಶರಣಾಗಿದೆ ಎಂದು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಜೈರಾಮ್​ ರಮೇಶ್​ ಕಿಡಿಕಾರಿದ್ದಾರೆ.

"ಶೌರ್ಯ ಪಡೆ" ಸಾಹಸಕ್ಕೆ DGP ಮೆಚ್ಚುಗೆ!

ಗುರುವಾರ (ಅ.22) ರಂದು ರಾಜಸ್ಥಾನದ, ಅಲ್ವರ್​ನಲ್ಲಿ ನಡೆದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ವಾರ್ಷಿಕ ಸನ್ಮಾನ ಸಮಾರಂಭವಾದ 'ಹಿಮವೀರ ಸಮ್ಮಾನ್ ಸಮಾರೋಹ'ದಲ್ಲಿ ಮಾತನಾಡಿದ ಶತ್ರುಜೀತ್ ಕಪೂರ್, ಹಲವು ಸಮಯದಿಂದ ಎಲ್​ಎಸಿ ಯಲ್ಲಿ ನಮ್ಮ ಹಾಗೂ ಚೀನಿಯರ ನಡುವೆ ಮುಖಾಮುಖಿ ನಡೆದಿದೆ. ಈ ಸಮಸ್ಯೆಗೆ ಇಲ್ಲಿವರೆಗೆ ಪರಿಹಾರ ದೊರೆತಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದ ಹಲವು ಕಡೆ, ಈ ಮುಖಾಮುಖಿ ನಡೆದಿದ್ದು, ಈ ಸಂದರ್ಭದಲ್ಲಿ ಐಟಿಬಿಪಿಯ ಕಮೊಂಡೊ ಪಡೆಯಾದ ಶೌರ್ಯ ಪಡೆ ಮೆರೆದಿರುವ ಸಾಹಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲು ಕೇವಲ ಭಾರತ-ಚೀನಾ ಗಡಿಯಲ್ಲಿರುವ ಬೆಟ್ಟ-ಗುಡ್ಡಗಳನ್ನು ಕಾಯುತ್ತಿದ್ದ ನಾವು ಈಗ ಎದೆಗೆ ಎದೆಕೊಟ್ಟು ಹೋರಾಡುವ, ಗಡಿಯನ್ನು ಕಾಯುವ ಮಟ್ಟವನ್ನು ತಲುಪಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

Also Read
"ಪರಿಸರ ಹಾಳುಗೆಡವಿದ್ದು ಯಾರು?" "ದಶಕಗಳ ಕಾಲ ದೌರ್ಜನ್ಯ ಎಸಗಿದ್ದು ನೀವೇ": ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪಿಯೂಷ್ ಗೋಯಲ್ ಚಾಟಿ! Piyush Goyal
ITBP Director General speaks on the LAC border situation at the 'Himaveera Samman' ceremony in Alwar, Rajasthan; Congress leader Jairam Ramesh criticizes the Central Government's border policy.

ಮೋದಿ ಮೌನಕ್ಕೆ ಶರಣಾಗಿದ್ದಾರೆ: ಜೈರಾಮ್​ ರಮೇಶ್​ ವಾಗ್ದಾಳಿ!

ಐಟಿಬಿಪಿ ಮುಖ್ಯಸ್ಥರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕಾಂಗ್ರೆಸ್​ ಮುಖ್ಯ ಕಾರ್ಯದರ್ಶಿ ಜೈರಾಮ್​ ರಮೇಶ್​ ಪ್ರಧಾನಿ ಮೋದು ಆದಿಯಾಗಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಐಟಿಬಿಪಿ ಮುಖ್ಯಸ್ಥರೇ, ಚೀನಾ ಜೊತೆ ನಮ್ಮ ಮುಖಾಮುಖಿ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಆಗಲೀ, ಸರ್ಕಾರವಾಗಲೀ ಏನು ಹೇಳಿಕೆ ನೀಡುತ್ತಿಲ್ಲ. ಪ್ರಧಾನ ಮೋದಿ ಮೌನಕ್ಕೆ ಶರಣಾಗಿದ್ದಾರೆಂದು ಹರಿಹಾಯ್ದಿದ್ದಾರೆ.

ಕಳೆದ ಕೆಲ ದಿನಗಳಿಂದ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಲೇ ಇದೆ. ಅರುಣಾಚಲ ರಾಜ್ಯದ ಹಲವು ಪ್ರದೇಶಗಳ ಹೆಸರನ್ನು ಚೀನಾ ಬದಲಿಸಿದೆ ಹಾಗೂ ಅಲ್ಲಿ 60 ಸಾವಿರ ಮೆಗಾವ್ಯಾಟ್​​ನ ಡ್ಯಾಂ ನಿರ್ಮಾಣ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net