Sanjay Singh: ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿರುವುದು ಕಾನೂನಬಾಹಿರ ಎಂದು ಸಂಸದ ಸಂಜಯ್ ಸಿಂಗ್ ಇಂದು (ಸೆಪ್ಟೆಂಬರ್ 10) ಕಿಡಿಕಾರಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದ ಆರೋಪಡಿಯಲ್ಲಿ ಎಎಪಿ ಜೆಕೆ ಘಟಕದ ಅಧ್ಯಕ್ಷರಾಗಿದ್ದ ಮಲಿಕ್ ಅವರನ್ನು ಕಾನೂನು ಕ್ರಮದಡಿಯಲ್ಲಿ ಸೋಮವಾರ (ಸೆಪ್ಟೆಂಬರ್ 08) ಬಂಧಿಸಿ, ಕಥುವಾ ಜಿಲ್ಲಾ ಜೈಲಿನಲ್ಲಿ ಇರಿಸಲಾಯಿತು. ಇದು ಅಲ್ಲಿನ ರಾಜಕೀಯ ನಾಯಕರಲ್ಲಿ ತೀವ್ರ ಗೊಂದಲವನ್ನುಂಟು ಮಾಡಿತು.
ಇದನ್ನೂ ಓದಿ: ನಿಮ್ಮ ಉಗುರುಗಳನ್ನು ನೀವೇ ಕಚ್ಚಿದ್ರೂ ಅಪಾಯ ಖಂಡಿತ! ದೇಹದ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ onychophagia
ಈ ರೀತಿ ಮಲಿಕ್ ಅವರನ್ನು ಬಂಧಿಸಿರುವುದು ಸಂವಿಧಾನ ಬಾಹಿರ. ಇದು ಚುನಾಯಿತ ಪ್ರತಿನಿಧಿಗಳ ಧ್ವನಿಯನ್ನು ಅಡಗಿಸುವಂತಹ ಪ್ರಯತ್ನ ಇದಾಗಿದೆ. ಇನ್ನು ಅವರ ವಿರುದ್ಧ ಪಿಎಸ್ಎ ಹೇರುವುದು ನೂರಕ್ಕೆ ನೂರು ತಪ್ಪು. ತನ್ನ ಕ್ಷೇತ್ರದ ಪರವಾಗಿ ಧ್ವನಿ ಎತ್ತಿದಕ್ಕಾಗಿ ಇವರ ಮೇಲೆ ಭಯೋತ್ಪಾದಕರಿಗೆ ಬಳಸುವ ಸೆಕ್ಸನ್ ಹೇರಲಾಗಿದೆ. ಇದು ತುಂಬಾ ದೊಡ್ಡ ತಪ್ಪು ಎಂದು ಸುದ್ದಿಮೂಲಗಳಿಗೆ ಸಿಂಗ್ ತಿಳಿಸಿದ್ದಾರೆ.
ಈ ಅನ್ಯಾಯದ ವಿರುದ್ಧ ನಾವು ಬೀದಿಗಳಲ್ಲಿ, ಸಂಸತ್ತಿನಲ್ಲಿ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸುತ್ತೇವೆ. ಇನ್ನು ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ದಮನಕಾರಿ ತಂತ್ರಗಳನ್ನು ಬಳಸುವ ಮೂಲಕ ನಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕಲಹದಲ್ಲಿ ಯುವಕನ ಕೊಲೆ
ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್ ಮತ್ತು ನನ್ನನ್ನೂ ಜೈಲಿಗೆ ಹಾಕಿದ್ದರು. ಆದರೆ, ಇಂದು ಮೆಹ್ರಾಜ್ ಮಲಿಕ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿಸಿದರು.
ಇನ್ನು ಮಲಿಕ್ ಬಂಧನವನ್ನು ವಿರೋಧಿಸಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಪ್ರದರ್ಶನಗಳು ನಡೆಯುವ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ ಕನಿಷ್ಟ ಎಂದು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. (ಏಜೆನ್ಸೀಸ್)