ರಶ್ಮಿಕಾ ಮಂದಣ್ಣ ಅವರು ‘ಮೈಸಾ’ ಎಂಬ ಹೊಸ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಮತ್ತು ಲುಕ್ ಸಂಪೂರ್ಣವಾಗಿ ಭಿನ್ನವಾಗಿದೆ. ರೊಮ್ಯಾಂಟಿಕ್ ಪಾತ್ರಗಳಿಂದ ದೂರ ಸರಿದು, ಒಂದು ಮಹಿಳಾ ಪ್ರಧಾನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
Rashmika Mandanna| ಪುಷ್ಪ ಸಿನಿಮಾ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಇಂದು (27) ನಿರ್ಮಾಪಕರು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಈ ಸಿನಿಮಾಗೆ 'ಮೈಸಾ' ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯಾ ತಾಯಿ ಹಾಗೂ ಚಾಲಕನಿಗೆ ಗುಂಡಿಕ್ಕಿ ಹತ್ಯೆ| shot-dead
ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಇಷ್ಟ ಆಗುತ್ತಾರೆ. ಅವರು ಇತ್ತೀಚೆಗೆ ನಟನೆಯಲ್ಲಿ ಪಳಗಿದ್ದಾರೆ. ಹೀಗಾಗಿ, ವಿವಿಧ ರೀತಿಯ ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ಈಗ ಮಹಿಳಾ ಪ್ರಧಾನ ಸಿನಿಮಾ ಒಂದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮೈಸಾ’ ಎಂಬ ಟೈಟಲ್ ಇಡಲಾಗಿದೆ. ಅವರ ಲುಕ್ ಭಿನ್ನವಾಗಿದ್ದು, ಈ ಶೀರ್ಷಿಕೆ ಗಮನ ಸೆಳೆಯುವಂತಿದೆ. ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಎಂಬುವವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚೀನಾ ರಕ್ಷಣಾ ಸಚಿವರನ್ನು ಭೇಟಿಯಾದ ರಾಜನಾಥ್ ಸಿಂಗ್; ಸಕಾರಾತ್ಮಕತೆ ಕಾಯ್ದುಕೊಳ್ಳುವಂತೆ ಒತ್ತಾಯ| Rajnath singh
ಟೈಟಲ್ ರಿವೀಲ್ ಪೋಸ್ಟರ್‌ನಲ್ಲಿ, ರಶ್ಮಿಕಾಳನ್ನು ಉಗ್ರ ನೋಟದಲ್ಲಿ, ಮುಖದ ಮೇಲೆ ರಕ್ತದ ಕಲೆಗಳೊಂದಿಗೆ ಕಾಣಬಹುದು. ಅವರು ಸೀರೆಯಲ್ಲಿ ಮತ್ತು ಬುಡಕಟ್ಟು ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೈಟಲ್ ರಿವೀಲ್ ಪೋಸ್ಟರ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರರು, ರಶ್ಮಿಕಾ ಬೆಂಕಿಯನ್ನು ಉಸಿರಾಡುತ್ತಿದ್ದಾರೆ, ಈ ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಆಗಲಿದೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, ಸೂಪರ್ ಹಿಟ್ ಹೋಗಿ ಮಾಮ್"ಎಂದು ಬರೆದಿದ್ದಾರೆ.
(ಏಜೆನ್ಸೀಸ್)
ಇಂದು ಮುಂಜಾನೆ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುಂಬರುವ ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.