ನ್ಯೂಸ್

ಜಾನುವಾರುಗಳ ನೀರಿನ ದಾಹ ತಣಿಸಲು ಹೋದ ತಾಯಿ-ಮಗ ದುರ್ಮರಣ

ಹಾಸನ: ತಾಲೂಕಿನ ಕೊರವಂಗಲ ಗ್ರಾಮದಲ್ಲಿ ನೀರಿನ ಹೊಂಡದಲ್ಲಿ ಮುಳುಗಿ ತಾಯಿ‌-ಮಗು ಇಬ್ಬರೂ ದುರ್ಮರಣಕ್ಕೀಡಾಗಿದ್ದಾರೆ.

ಶೃತಿ(33) ಮತ್ತು ಇವರ ಪುತ್ರ ನಿಷಾಂತ್(4) ಮೃತ ದುರ್ದೈವಿಗಳು. ಜಾನುವಾರುಗಳಿಗೆ ನೀರು ಕುಡಿಸಲೆಂದು ಶನಿವಾರ ಬೆಳಗ್ಗೆ ಶೃತಿ ತನ್ನ ಮಗುವನ್ನ ಎತ್ತಿಕೊಂಡು ಹೋಗಿದ್ದರು.

ಈ ವೇಳೆ ಹೊಂಡಕ್ಕೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದುದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾನುವಾರುಗಳ ನೀರಿನ ದಾಹ ತಣಿಸಲು ಹೋದ ತಾಯಿ-ಮಗು ದುರ್ಮರಣಕ್ಕೀಡಾದ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.