ನವದೆಹಲಿ: ಭಾರತದಲ್ಲಿನ ಸುಮಾರು ನಾಲ್ಕು ಸಾವಿರ ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿದ್ದು, ಮುಂದೇನು ಎಂಬ ಚಿಂತೆ ಅವರನ್ನು ಕಾಡಲಾರಂಭಿಸಿದೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಆತಂಕಕ್ಕೆ ತಳ್ಳಿರುವುದು ಅವರು ಕೆಲಸ ಮಾಡುತ್ತಿರುವ ಕಂಪನಿಯ ಒಂದೇ ಒಂದು ನಿರ್ಧಾರ.
ಫೋರ್ಡ್ ಕಂಪನಿಯು ಭಾರತದಲ್ಲಿನ ಕಾರು ಉತ್ಪಾದಿಸುವ ಎರಡು ಘಟಕಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ನಿರ್ಧರಿಸಿರುವುದೇ ಇಷ್ಟಕ್ಕೆಲ್ಲ ಕಾರಣ. ಸನಂದ್ ಘಟಕ ಹಾಗೂ ಚೆನ್ನೈನ ಇಂಜಿನ್ ಹಾಗೂ ವೆಹಿಕಲ್ ಅಸೆಂಬ್ಲಿ ಪ್ಲ್ಯಾಂಟ್ನಲ್ಲಿ ದೇಶೀಯ ಬಳಕೆಯ ಕಾರುಗಳ ಉತ್ಪಾದನೆಯನ್ನು ಕಂಪನಿ ನಿಲ್ಲಿಸಿದೆ.
ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…
ಹೀಗೆ ಎರಡು ಉತ್ಪಾದನಾ ಘಟಕಗಳನ್ನು ಹಠಾತ್ ಆಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ಇಲ್ಲಿ ಕೆಲಸ ಮಾಡುವ ಸುಮಾರು 4 ಸಾವಿರ ಉದ್ಯೋಗಿಗಳನ್ನು ಮುಂದೇನು ಎಂಬ ಆತಂಕದಲ್ಲಿದ್ದಾರೆ. 'ಕಂಪನಿಯು ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 2 ಬಿಲಿಯನ್ ಡಾಲರ್ಗೂ ಅಧಿಕ ಹೂಡಿಕೆ ಮಾಡಿದ್ದರೂ ನಷ್ಟ ಉಂಟಾಗಿದೆ. ಮತ್ತೊಂದೆಡೆ ವಾಹನಗಳ ಮಾರಾಟದಲ್ಲೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ' ಎಂಬುದಾಗಿ ಫೋರ್ಡ್ ಮೋಟಾರ್ ಕಂಪನಿಯ ಸಿಎಒ ಮತ್ತು ಅಧ್ಯಕ್ಷರೂ ಆಗಿರುವ ಜಿಮ್ ಫಾರ್ಲೆ ಸಮಜಾಯಿಷಿ ನೀಡಿದ್ದಾರೆ. (ಏಜೆನ್ಸೀಸ್)