aamir-khans; ಇತ್ತೀಚೆಗೆ ಸೀತಾರೆ ಜಮೀನ್ ಪರ್ ನಲ್ಲಿ ಕಾಣಿಸಿಕೊಂಡಿದ್ದ ಅಮಿರ್ ಖಾನ್, ತಮ್ಮ ನಿವಾಸದ ಹೊರಗಿನ ದೃಶ್ಯಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಪೊಲೀಸ್ ವಾಹನಗಳು ಅವರ ಬಾಂದ್ರಾ ಮನೆಯಿಂದ ಹೊರಡುತ್ತಿರುವುದನ್ನು ಕಾಣಬಹುದಾಗಿದೆ.
25 ಐಪಿಎಸ್ ಅಧಿಕಾರಿಗಳ ತಂಡ ಅಮೀರ್ ಖಾನ್ ಅವರ ಮನೆಗೆ ಭೇಟಿ ನೀಡಿತ್ತು.
ಆಮಿರ್ ಖಾನ್ 1999ರಲ್ಲಿ ಬಿಡುಗಡೆಯಾದ ಅವರ 'ಸರ್ಫರೋಶ್' ಚಿತ್ರದ ಸಂದರ್ಭದಲ್ಲಿಯೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಇನ್ನೂ ಈ ಬಗ್ಗೆ ಅಮಿರ್ ಅವರ ತಂಡ ಮಾಹಿತಿ ನೀಡಿದ್ದು, ನಟ ಅಮಿರ್ ಭದ್ರತೆಗೆ ಸಂಬಂಧಿಸಿದ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಬ್ಯಾಚ್‌ನ ಐಪಿಎಸ್ ಟ್ರೈನೀಸ್ ಅವರೊಂದಿಗೆ ಸಭೆ ನಡೆಸಲು ವಿನಂತಿಸಿದ್ದರು. ಇದಕ್ಕೆ ಆಮಿರ್ ಖಾನ್ ತಮ್ಮ ನಿವಾಸಕ್ಕೆ ಅವರನ್ನು ಕರೆದಿದ್ದರು ಎಂದು ಆಮಿರ್ ಅವರ ತಂಡ ಸ್ಪಷ್ಟನೆ ನೀಡಿದೆ.
(ಏಜೆನ್ಸೀಸ್)
ಅವರ ಸಿತಾರೆ ಜಮೀನ್ ಪರ್ ಚಿತ್ರ ಬಿಡುಗಡೆಯಾಗಿ 1 ತಿಂಗಳಿಗೂ ಹೆಚ್ಚು ಸಮಯವಾಗಿದೆ. ಆರ್‌ಎಸ್ ಪ್ರಸನ್ನ ನಿರ್ದೇಶನದ ಈ ಚಿತ್ರ ಭಾರತದಲ್ಲಿ ಸುಮಾರು 165 ಕೋಟಿ ಗಳಿಸಿದೆ. ಜೆನೆಲಿಯಾ ಡಿಸೋಜಾ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.