ನ್ಯೂಸ್

ಕಾಗೆಗಳ ಬಸ್​ಟಾಪ್​ ಪ್ರಯಾಣ.. ಸವಾರಿ ಹೊರಟಿದ್ದೆಲ್ಲಿಗೆ ಎಂದ ನೆಟ್ಟಿಗರು!

ಮುಂಬೈ: ಆಹಾರ ಸಿಕ್ಕಾಗ ಅಥವಾ ಕಾಗೆಯೊಂದು ಅಪಾಯಕ್ಕೀಡಾಗಿ ಕಿರುಚಿದಾಗ ದೂರದಿಂದ ಹಾರಿಬಂದು ಕಾಗೆಗಳು ಗುಂಪುಗೂಡುವುದನ್ನು ಕಾಣಬಹುದು. ಆದರೆ ಚಲಿಸುವ ಬಸ್​ ಟಾಪ್​ ಮೇಲೆ ಕುಳಿತು ಪ್ರಯಾಣ ಬೆಳೆಸುವುದನ್ನು ಎಂದಾದರೂ ನೋಡಿದ್ದೀರಾ? ಹೌದು, ಮುಂಬೈ ಮಹಾನಗರದಲ್ಲಿ 10-15 ಕಾಗೆಗಳು ಬಸ್​ ಟಾಪ್​ ಪ್ರಯಾಣ ಬೆಳೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ವೈರಲ್ ಆಗಿದೆ.

ಇತ್ತೀಚೆಗೆ 'X' ನಲ್ಲಿ ಕಾಗೆಗಳ ಬಸ್​ಟಾಪ್​ ಪ್ರಯಾಣದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಈಗಾಗಲೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗಿದೆ.

ಈ ಅಸಾಧಾರಣ ದೃಶ್ಯಕ್ಕೆ ಪ್ರತಿಕ್ರಿಯಿಸಿದ ನೆಟಿಜನ್‌ಗಳು ನಗುವಿನ ಎಮೋಜಿಗಳನ್ನು ಹಾಕಿದ್ದಾರೆ. ಇನ್ನೂ ಕೆಲವರು ಕಾಗೆಗಳು ಟಿಕೆಟ್‌ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಬಸ್​ ಟಾಪ್​ ಏರಿವೆ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೆ ಕೆಲವರು ಬಸ್​ ಭರ್ತಿಯಾಗಿದ್ದರಿಂದ ನ್ಯಾಚುರಲ್​ ಏರ್​ಕಂಡಿಷನ್​ ಅನುಭವ ಪಡೆಯಲು ಟಾಪ್​ಪ್ರಯಾಣ ಮಾಡುತ್ತಿರಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ಇದೀಗ ಈ ವೀಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಆಕರ್ಷಿಸಿದೆ.