ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್-1 ಜಾರಿಯಾಗಿ ಎರಡು ದಿನ ಕಳೆದಿದ್ದೆ. ಹಾಗೇ 300-500ರವರೆಗೂ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆಯಲ್ಲೂ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣುತ್ತಿದೆ.
ಕಳೆದ 24 ಗಂಟೆಯಲ್ಲಿ 120 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿದೆ. ಇಂದು 257 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2862 ಆಗಿದೆ. ಇಂದು ಮೂವರು ಕೊವಿಡ್-19ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 69ಕ್ಕೆ ಏರಿದೆ. 120 ಹೊಸ ಕೇಸ್ಗಳಲ್ಲಿ 68 ಅಂತಾರಾಜ್ಯ ಪ್ರಯಾಣಿಕರಾಗಿದ್ದು, 3 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇದನ್ನೂ ಓದಿ: ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್ನ್ಯೂಸ್; ಇನ್ನು ಭಯ ಪಡುವ ಅಗತ್ಯವಿಲ್ಲ…
24 ಗಂಟೆಯಲ್ಲಿ ಇಂದು ಬೆಂಗಳೂರು ನಗರದಲ್ಲಿಯೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 42 ಪ್ರಕರಣಗಳು ದಾಖಲಾಗಿವೆ. ಯಾದಗಿರಿಯಲ್ಲಿ 27, ವಿಜಯಪುರ 13, ಕಲಬುರಗಿ 11, ಬೀದರ್ 5, ದಕ್ಷಿಣ ಕನ್ನಡ 4, ಧಾರವಾಡ 4, ದಾವಣಗೆರೆ, ಹಾಸನ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ ಒಬ್ಬರಲ್ಲಿ ಕೊವಿಡ್-19 ದೃಢಪಟ್ಟಿದೆ. ಇದನ್ನೂ ಓದಿ: ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು