Pulsar Suni : ಮಲಯಾಳಂ ಚಿತ್ರರಂಗದಲ್ಲಿ 2017 ರಲ್ಲಿ ಯುವ ನಟಿಯ ಮೇಲೆ ನಡೆದ ದಾಳಿ ಇಡೀ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. 7 ಮಂದಿ ಆ ನಟಿಯ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆದರೆ, ಈ ದಾಳಿಗೂ ಮೊದಲೇ ಮಲಯಾಳಂ ಚಿತ್ರರಂಗದ ಅನೇಕ ನಟಿಯರ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿ ಪಲ್ಸರ್ ಸುನಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.
ನ್ಯೂಸ್ ಚಾನೆಲ್ ಒಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಪಲ್ಸರ್ ಸುನಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಇದೆಲ್ಲದರ ಹಿಂದೆ ದಿಲೀಪ್ ಇಲ್ಲ, ಆದರೆ ಇದೆಲ್ಲವೂ ದಿಲೀಪ್ ಅವರ ಅರಿವಿನಿಂದಲೇ ನಡೆದಿದೆ. ಆ ಎಲ್ಲ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಪಲ್ಸರ್ ಅಚ್ಚರಿಯ ಹೇಳಿಕೆ ನೀಡಿದ್ದಾನೆ.
ಸಿನಿಮಾ ರಂಗದಲ್ಲಿ ಅಸ್ತಿತ್ವವೇ ಎಲ್ಲ ಕಲಾವಿದರ ಪ್ರಮುಖ ಸಮಸ್ಯೆಯಾಗಿದೆ. ಯಾರ ಸಹಾಯವೂ ಅಗತ್ಯವಿಲ್ಲದವರು ಯಾವುದೇ ದೌರ್ಜನ್ಯದ ವಿರುದ್ಧ ಓಪನ್ ಆಗಿ ಮಾತನಾಡುತ್ತಾರೆ. ನಟಿ ರೀಮಾ ಕಲ್ಲಿಂಗಲ್ ಅವರಂತಹವರು ಮಾತ್ರ ಮಾತನಾಡುತ್ತಾರೆ. ಸಿನಿಮಾ ರಂಗದಲ್ಲಿ ಏನಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ದಿಲೀಪ್ ತನ್ನ ಎಲ್ಲ ದೌರ್ಜನ್ಯಗಳನ್ನು ತಿಳಿದಿದ್ದ. ಅದಕ್ಕಾಗಿಯೇ ಆತ ಯುವ ನಟಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಹೇಳಿಕೆ ನೀಡಿದರು ಎಂದು ಪಲ್ಸರ್ ಹೇಳುತ್ತಾನೆ.
ಯುವ ನಟಿಯ ಮೇಲೆ ಹಲ್ಲೆ ನಡೆಸಲು ಹಣದ ಆಫರ್ ನೀಡಿದ್ದನ್ನು ಪಲ್ಸರ್ ಸುನಿ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಈ ಪ್ರಕರಣದ ಆರೋಪಿಯೂ ಆಗಿರುವ ದಿಲೀಪ್ 1.5 ಕೋಟಿ ರೂ. ಆಫರ್ ನೀಡಿದ್ದರು. ಆದರೆ, ಸಂಪೂರ್ಣ ಮೊತ್ತವನ್ನು ಸ್ವೀಕರಿಸಿಲ್ಲ, ಇನ್ನೂ 80 ಲಕ್ಷ ರೂ.ಗಳನ್ನು ಪಡೆಯಬೇಕಾಗಿದೆ ಮತ್ತು ಅಗತ್ಯವಿದ್ದಾಗ ದಿಲೀಪ್ ಅವರಿಂದ ಹಲವಾರು ಬಾರಿ ಹಣವನ್ನು ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೆ 7 ವರ್ಷಗಳ ಜೈಲುವಾಸ ಅನುಭವಿಸಿದ ಪಲ್ಸರ್ ಸುನಿ ಇದೀಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ.
20217, ಫೆಬ್ರವರಿ 17 ರಂದು ತ್ರಿಶೂರ್ನಿಂದ ಎರ್ನಾಕುಲಂಗೆ ತೆರಳುತ್ತಿದ್ದಾಗ ಯುವ ನಟಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಸುನಿ ಮತ್ತು ಅವನ ಗ್ಯಾಂಗ್ ನಕಲಿ ಕಾರು ಅಪಘಾತ ಸೃಷ್ಟಿಸಿ ನಟಿಯ ವಾಹನ ಹತ್ತಿದ್ದರು. ನಟಿಯನ್ನು ಕರೆದುಕೊಂಡು ಹೋಗಲು ನಿಯೋಜಿಸಲಾದ ಚಾಲಕ ಮಾರ್ಟಿನ್ ಕೂಡ ದಾಳಿಕೋರರೊಂದಿಗೆ ಸೇರಿಕೊಂಡಿದ್ದ. ಕೊಚ್ಚಿ ಪ್ರದೇಶದಲ್ಲಿ ನಟಿಯ ಮೇಲೆ ಒಂದು ಗಂಟೆಗೂ ಹೆಚ್ಚು ಕಾಲ ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಹ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಲಾಯಿತು. ಕೊನೆಗೆ, ವಾಹನವನ್ನು ತ್ಯಜಿಸಿ ಪರಾರಿಯಾಗಿದ್ದರು.
ನಟಿ ಧೈರ್ಯದಿಂದ ಪ್ರಕರಣವನ್ನು ಮುಂದುವರಿಸಿದ ನಂತರ ಆರೋಪಿಗಳನ್ನು ಬಂಧಿಸಲಾಯಿತು. ಇಂದಿಗೂ ಈ ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಇದೆ. (ಏಜೆನ್ಸೀಸ್)