ನ್ಯೂಸ್

ಐದು ಎಕರೆಯಲ್ಲಿ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಕೆ!

ನೀರಿಲ್ಲ, ಮಣ್ಣು ಸರಿಯಿಲ್ಲ, ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ ಅಂತ ಸಮಸ್ಯೆಗಳನ್ನು ಹೇಳುತ್ತಾ, ಕೃಷಿಯಿಂದ ದೂರ ಸರಿಯುವವರ ಮಧ್ಯೆ ಕೋಲಾರದ ರೈತರೊಬ್ಬರು 5 ಎಕರೆ ಕೃಷಿ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದು ತಿಂಗಳಿಗೆ ಸುಮಾರು 4 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿರುವ ಪ್ರಿಯಾ ಆಗ್ರೋ ಫಾರ್ಮ್​ನ ಸುಧೀಂದ್ರ ಸಮಗ್ರ ಕೃಷಿ ಅಳವಡಿಸಿಕೊಂಡು ಪ್ರತಿದಿನವೂ ಒಂದಲ್ಲ ಒಂದು ಉತ್ಪನ್ನದಿಂದ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. 15 ರೀತಿಯ ಹಣ್ಣುಗಳು, 15 ರೀತಿಯ ತರಕಾರಿ, ಕೋಳಿ- ಹಸು -ಮೀನು ಸಾಕಣೆ, ಕೃಷಿ ಹೊಂಡ ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡಿರುವ ಈ ಅನ್ನದಾತ, ಆಧುನಿಕ ರೀತಿಯಲ್ಲಿ ಕೃಷಿ ಮಾಡಬೇಕು ಎನ್ನುವವರಿಗೆ ಮಾದರಿಯಾಗಿದ್ದಾರೆ.

ರೈತೋದ್ಯಮಿ ತೋಟದಲ್ಲಿ 15 ರೀತಿ ಹಣ್ಣು: ತೈವಾನ್ ಸೀಬೆ, ಪ್ಯಾಷನ್ ಫೂ›ಟ್, ಸಪೋಟ, ನೇರಳೆ, ಮಾವು, ಸೀತಾಫಲ, ರಾಮಫಲ, ಹನುಮಫಲ, ಲಕ್ಷ್ಮಣ ಫಲ, ಸ್ಟಾರ್ ಫೂ›ಟ್, ಡ್ರಾ್ಯಗನ್ ಫೂ›ಟ್, ವಾಟರ್ ಆಪಲ್, ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಬೆಳೆದಿರುವ ರೈತೋದ್ಯಮಿ ವರ್ಷಕ್ಕೆ ಈ ಹಣ್ಣುಗಳಿಂದಲೇ ಸುಮಾರು 50 ಲಕ್ಷ ರೂ.ವರೆಗೂ ಆದಾಯ ಗಳಿಸುತ್ತಿದ್ದಾರೆ. ತೈವಾನ್ ಸೀಬೆಯನ್ನು ಮುಖ್ಯ ಬೆಳೆಯಾಗಿ ಸುಮಾರು 3 ಎಕರೆಯಲ್ಲಿ ಬೆಳೆದಿರುವ ಅವರು, ಇನ್ನುಳಿದ ಎಲ್ಲ ಗಿಡಗಳನ್ನು ಮಿಶ್ರಣ ಮಾಡಿ ಬೆಳೆಸಿದ್ದಾರೆ. 1 ಎಕರೆಗೆ ಸುಮಾರು 500 ತೈವಾನ್ ಸೀಬೆ ಗಿಡಗಳನ್ನು ಬೆಳೆಸಬಹುದು. ಒಂದು ಗಿಡಕ್ಕೆ ಸುಮಾರು 50ರಿಂದ 60 ಕೆ.ಜಿ. ಇಳುವರಿ ಸಿಗುವುದರಿಂದ ಪ್ರತಿ ಕೆ.ಜಿ.ಯನ್ನು 50ರಿಂದ 60 ರೂ.ಗೆ ಮಾರಾಟ ಮಾಡಿದರೂ ವರ್ಷಕ್ಕೆ ಸುಮಾರು 43 ಲಕ್ಷ ರೂ. ಸೀಬೆಯಿಂದಲೇ ಬರುತ್ತದೆ. ಸೀಬೆ ಗಿಡಗಳು 365 ದಿನವೂ ಫಲ ಕೊಡುವ ತಳಿಯಾಗಿರುವುದರಿಂದ ಇದು ಸಾಧ್ಯವಾಗುತ್ತಿದೆ. ತೋಟದಲ್ಲಿರುವ 22 ನೇರಳೆ ಗಿಡಗಳಿಂದ ವರ್ಷಕ್ಕೆ ಸುಮಾರು 2 ಲಕ್ಷ ರೂ. ಆದಾಯ ಸಿಗುತ್ತದೆ. 1 ಮರಕ್ಕೆ 60 ಕೆಜಿ ಇಳುವರಿ ಸಿಕ್ಕಿ ಒಂದು ಕೆಜಿ 250 ರೂ.ಗೆ ಮಾರಾಟವಾದರೆ ಸುಮಾರು 2 ಲಕ್ಷ ರೂ. ಗಳಿಕೆ ಸಾಧ್ಯವಾಗುತ್ತದೆ. ಇನ್ನು ಪ್ಯಾಷನ್​ಫೂ›ಟ್ ಗಿಡಗಳನ್ನು ನೆರಳಿಗಾಗಿ ಬದುಗಳಲ್ಲಿ ಹಾಕಿದ್ದು ವರ್ಷದಲ್ಲಿ 1.5 ಲಕ್ಷ ರೂ.ವರೆಗೂ ಆದಾಯ ಸಿಗುತ್ತಿದೆ. ಪ್ಯಾಷನ್ ಹಣ್ಣು ಮಾರಾಟ ಆಗದಿದ್ದರೆ ಮೌಲ್ಯವರ್ಧನೆ ಮಾಡಿ ಪಲ್ಪ್ ವಿತ್ ಸೀಡ್ಸ್ ಮತ್ತು ಪಲ್ಪ್ ವಿತ್ ಔಟ್ ಸೀಡ್ಸ್ ಎಂದು ವಿಂಗಡಿಸಿ ಪ್ರತಿ ಕೆಜಿ 600 ರೂ.ಗೆ ಮಾರಾಟ ಮಾಡುತ್ತಾರೆ. ಉಳಿದಂತೆ ವಿವಿಧ ಮಾದರಿಯ ಹಣ್ಣಿನ ಗಿಡಗಳಿಂದಲೂ ಉತ್ತಮ ಆದಾಯ ಸಿಗುತ್ತಿದೆ.

ತರಕಾರಿ ಬೆಳೆಯಿಂದಲೂ ಆದಾಯ: ಈ ರೈತೋದ್ಯಮಿ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ಗಮನ ಸೆಳೆದಿದ್ದಾರೆ. ತರಕಾರಿಗಳಿಂದ ನಿಯಮಿತವಾಗಿ ಆದಾಯ ಬರುವಂತೆ ಪ್ಲಾ್ಯನ್ ಮಾಡಿದ್ದಾರೆ. ಬೆಂಡೆಕಾಯಿ, ಅವರೆಕಾಯಿ, ಟೊಮ್ಯಾಟೋ, ಹಾಗಲಕಾಯಿ, ಬಜ್ಜಿ ಮೆಣಸಿನಕಾಯಿ, ಕ್ಯಾಪ್ಸಿಕಂ, ನುಗ್ಗೆಕಾಯಿ, ಬದನೆಕಾಯಿ ಹೀಗೆ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. ಖಾಸಗಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನುಗ್ಗೆ ಸೊಪ್ಪಿನ ಪೌಡರ್ ಮಾಡಿ ಪ್ರತಿ ಕೆಜಿ ಪೌಡರ್ ಅನ್ನು 650 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಮಾರುಕಟ್ಟೆಗಾಗಿ ತೋಟದಲ್ಲೇ ಅಂಗಡಿ: ಇಷ್ಟೇ ಅಲ್ಲ, ತೋಟದಲ್ಲೇ ಒಂದು ಮಾರಾಟ ಮಳಿಗೆ ಸ್ಥಾಪಿಸಿ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಸೀಬೆ, ಮಾವು, ನೇರಳೆ, ಡ್ರಾ್ಯಗನ್​ಫೂ›ಟ್, ಪ್ಯಾಷನ್ ಫೂ›ಟ್ ಸೇರಿ ವಿವಿಧ ತರಕಾರಿಗಳು ಮತ್ತು ಇತರ ಕೃಷಿಯಾಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ನಾಟಿ ಕೋಳಿ, ಹೈನುಗಾರಿಕೆ, ಮೀನಿನಿಂದಲೂ ಆದಾಯ: 50 ನಾಟಿ ಕೋಳಿಗಳನ್ನು ಸಾಕಿರುವ ಈ ರೈತ ಪ್ರತಿ ಮೊಟ್ಟೆಯನ್ನು 50 ರೂ.ಗೆ ಮಾರಾಟ ಮಾಡುತ್ತಾರೆ. ಇನ್ನು ಪುಂಗನೂರು ತಳಿ ಹಸುವನ್ನು ಸಾಕಿದ್ದು, ಇದರ ಹಾಲನ್ನು ಆಯುರ್ವೆದ ಔಷಧ ಕಂಪನಿಗಳು 350 ರೂ. ಕೊಟ್ಟು ಖರೀದಿ ಮಾಡುತ್ತೇವೆ ಎನ್ನುತ್ತಾರೆ ಅವರು. ನೀರಿನ ಅಗತ್ಯ ಪೂರೈಸಿಕೊಳ್ಳಲು ಕೃಷಿ ಹೊಂಡ ನಿರ್ವಿುಸಿ ಅದರ ಸ್ವಚ್ಛತೆಗಾಗಿ ಮೀನುಗಳನ್ನು ಸಾಕಿ ಅದರಿಂದಲೂ ಆದಾಯ ಗಳಿಸುತ್ತಿದ್ದಾರೆ.