ಸಾಂದರ್ಭಿಕ ಚಿತ್ರ 
ನ್ಯೂಸ್

Monkey Pox: ದೇಶದಲ್ಲಿ ಹೆಚ್ಚಿದ ಮಂಗನ ಕಾಯಿಲೆ..ಕೇರಳದಲ್ಲಿ ಎರಡನೇ ಪ್ರಕರಣ ಪತ್ತೆ!

Webdesk - Narayanaswamy

ತಿರುವನಂತಪುರಂ: ದೇಶದಲ್ಲಿ ಮಂಗನ ಕಾಯಿಲೆ(Monkey Pox) ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇರಳದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಮಂಗನ ಕಾಯಿಲೆ(Monkey Pox) ಪ್ರಕರಣಗಳನ್ನು ತಡೆಗಟ್ಟಲು ರಾಜ್ಯಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಇದು ದೇಶದಲ್ಲಿ ಕಾಣಿಸಿಕೊಂಡ ಮೂರನೇ ಪ್ರಕರಣವಾಗಿದೆ. ಕೇರಳದ ಎರ್ನಾಕುಲಂ ನಿವಾಸಿಗೆ ಮಂಗನ ಕಾಯಿಲೆ ಬಂದಿರುವುದಾಗಿ ಕೇರಳ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ, ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶದಿಂದ ವಾಪಸ್ಸಾದ ವ್ಯಕ್ತಿ: (Monkey Pox)

ದುಬೈನಿಂದ ಕೇರಳಕ್ಕೆ ಮರಳಿದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. 38 ವರ್ಷದ ಈ ವ್ಯಕ್ತಿ ಮಲಪ್ಪುರಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟೆಂಬರ್ 9 ರಂದು ದೇಶದಲ್ಲಿ ಮೊದಲ ಮಂಗನ ಕಾಯಿಲೆ ದೃಢಪಟ್ಟಿತ್ತು. ವಿದೇಶದಿಂದ ಮರಳಿದ ವ್ಯಕ್ತಿಯನ್ನು ಮಂಗನ ಕಾಯಿಲೆಯ ಶಂಕೆಯ ಮೇರೆಗೆ ಸೆ.8 ರಂದು ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.