ಇತ್ತೀಚಿನ ವೈರಲ್ ವೀಡಿಯೋದಲ್ಲಿ ಪ್ರಾಣಿಗಳು ಕೂಡ ನೆಟ್ಟಿಗರ ಗಮನ ಸೆಳೆಯುವಲ್ಲಿ ಪ್ರಮುಖವಾಗಿದೆ. ಪ್ರಪಂಚದಾದ್ಯಂತ ನಡೆಯುವ ಹಲವು ಘಟನೆಗಳನ್ನು ಹೊರತುಪಡಿಸಿ ನೋಡುವುದಾದರೆ ಪ್ರಾಣಿಗಳ ಬೇಟೆ, ತುಂಟಾಟಗಳ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುಳ್ಳು!; ಆ ಮಗುವಿನ ವಿಚಾರದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಬಿಜೆಪಿ ಹೀಗಂದಿದ್ದೇಕೆ?
ಇದೀಗ ಕೋತಿಯೊಂದು ಮರದ ಮೇಲೆ ಕುಳಿತು ಸರ್ಪದ ಬಾಲವನ್ನು ಎಳೆದಾಡಿದ ವಿಡಿಯೋವೊಂದು ನೆಟ್ಟಿಗರನ್ನು ಆಶ್ವರ್ಯಚಕಿತರನ್ನಾಗಿ ಮಾಡಿದೆ. ಮರದ ಮೇಲ್ಭಾಗದಲ್ಲಿ ಕುಳಿತ್ತಿದ್ದ ಮಂಗ, ಹೆಡೆ ಎತ್ತಿದ ಸರ್ಪದ ಬಾಲವನ್ನು ಹಿಡಿದು ಎಳೆದಾಡಿದೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 52,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ನೋಡುಗರಿಂದ ವ್ಯಾಪಕ ಕಾಮೆಂಟ್ಗಳನ್ನು ಪಡೆದುಕೊಂಡಿದೆ.
ವಿಷಕಾರಿ ಹಾವಿನ ಬಾಲವನ್ನು ಎಳೆದಾಡಿದ ಕೋತಿ, ಅದನ್ನು ತನ್ನ ಕುತ್ತಿಗೆಗೆ ಸಿಕ್ಕಿಸಿಕೊಂಡಿದೆ. ಕಚ್ಚಬಹುದು ಎಂಬ ಭಯವನ್ನು ಮರೆತು ಸರ್ಪದೊಂದಿಗೆ ಆಟವಾಡಿದ ಮಂಗನ ಚೇಷ್ಟೆ ನೋಡಿ ಕೆಲವರು ದಿಗ್ಭ್ರಮೆಗೊಂಡಿದ್ದಾರೆ,(ಏಜೆನ್ಸೀಸ್).