ಸಾಂದರ್ಭಿಕ ಚಿತ್ರ 
ನ್ಯೂಸ್

VIDEO| ಕೋತಿಯನ್ನು ಮರಕ್ಕೆ ಬಿಗಿದು ಕೊಂದ್ರು!

Webdesk - Savina Naik

ನವದೆಹಲಿ: ಸೋಶಿಯಲ್​​ ಮೀಡಿಯಾದಲ್ಲಿ ಹಲವು ವೀಡಿಯೊಗಳು ವೈರಲ್​ ಆಗುತ್ತವೆ. ಆದರೆ ಇಂದು ಪ್ರಾಣಿ ಹಿಂಸೆಯ ಕೃತ್ಯಕ್ಕೆ ಸಂಬಂಧಿಸಿದ ವೀಡಿಯೊವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಕೋತಿಯನ್ನು ನೇಣಿಗೆ ಹಾಕಿದ ಆಘಾತಕಾರಿ ಪ್ರಕರಣಕ್ಕೆ ದೆಹಲಿ ನಡೆದಿದೆ. ಆಶರ್ ಜೆಸುಡೋಸ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಕೋತಿಯನ್ನು ನಿರ್ದಯವಾಗಿ ಮರಕ್ಕೆ ಕಟ್ಟಿಹಾಕಿ ನೇಣು ಹಾಕಿ ಕೊಲ್ಲಲಾಗಿದೆ. ನೆಟ್ಟಿಗರು ಈ ವೀಡಿಯೋ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಪ್ರಾಣಿಗಳು ಯಾವಾಗ ಸುರಕ್ಷಿತವಾಗಿರುತ್ತವೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸತ್ತ ಕೋತಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಸೋಲಾ ವನ್ಯಜೀವಿ ಅಭಯಾರಣ್ಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.