ನ್ಯೂಸ್

ಸರಿಯಾದ ಸಮಯಕ್ಕೆ ಸಾಲ ತೀರಿಸಲು ಮಗ ವಿಫಲ; ಪುತ್ರನ ಕಣ್ಣೆದುರಲ್ಲೇ ತಾಯಿಯನ್ನು Kidnap ಮಾಡಿದ Financier

ಹೈದರಾಬಾದ್​: ಪಡೆದಿದ್ದ ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಮಗನ ಕಣ್ಣೆದುರಲ್ಲೇ ತಾಯಿಯನ್ನು ಅಪಹರಿಸಿರುವ (Kidnap)  ಘಟನೆ ತೆಲಂಗಾಣದ ಕರೀಮ್​ನಗರ ಜಿಲ್ಲೆಯ ಕೊಡುಮುಂಜಾ ಗ್ರಾಮದಲ್ಲಿ ನಡೆದಿದೆ. ಅಪಹರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಿವೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer), ಕರೀಮ್​ನಗರ ಜಿಲ್ಲೆಯ ಕೊಡುಮುಂಜಾ ಗ್ರಾಮದ ಪಲ್ಲಪು ಶ್ರೀನಿವಾಸ್​ (Srinivas) ಎಂಬಾತ ಮಹಾರಾಷ್ಟ್ರ ಮೂಲದ ಲಾಲ್​ ದೇವಕರ್​ (Lal Devkar) ಎಂಬಾತನಿಂದ ಮೂರು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಶ್ರೀನಿವಾಸ್​ ಹಾಗೂ ಅವರ ಸಹೋದರ ಛತ್ತೀಸ್​ಗಢದಲ್ಲಿ ಕೆಲಸ ಮಾಡುತ್ತಿದ್ದು, ಪಡೆದಿದ್ದ ಸಾಲಬವನ್ನು ಸರಿಯಾದ ಸಮಯಕ್ಕೆ ತೀರಿಸಲು ಸಾಧ್ಯವಾಗಿರಲಿಲ್ಲ.

ಸರಿಯಾದ ಸಮಯಕ್ಕೆ ಸಾಲ ಕೊಡಲಿಲ್ಲವೆಂದು ಕುಪಿತಗೊಂಡಿದ್ದ ಆರೋಪಿ ಲಾಲ್​ ದೇವಕರ್​ ನವೆಂಬರ್​ 06ರಂದು ತನ್ನ ಸಹಚರರೊಂದಿಗೆ ಕೊಡುಮುಂಜಾ ಗ್ರಾಮಕ್ಕೆ ಆಗಮಿಸಿದ್ದು, ಶ್ರೀನಿವಾಸ್​ ಕುಟುಂಬದವರ ಮೇಲೆ ಹಲ್ಲೆ ನಡೆಸಿ ಅವರ ಕಣ್ಣೆದುರಲ್ಲೇ ತಾಯಿ ಪಲ್ಲಪು ಭೀಮಾಬಾಯಿ ಅವರನ್ನು ಅಪಹರಿಸಿದ್ದಾನೆ (Kidnap) . ಸಂತ್ರಸ್ತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ತಲೆಮಾರಿಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.