ನ್ಯೂಸ್

ಅಕ್ರಮ ಹಣ ವರ್ಗಾವಣೆ ಕೇಸ್: ಛತ್ತೀಸ್​ಗಡದ ಮಾಜಿ ಸಿಎಂ ಪುತ್ರ ಬಂಧನ! Chaithany Baghel

Chaithany Baghel: ಛತ್ತೀಸ್​ಗಡದ ಮಾಜಿ ಸಿಎಂ ಭೂಪೇಲ್ ಬಘೇಲ್ ಅವರ ಪುತ್ರ ಚೈತನ್ ಬಘೇಲ್​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಛತ್ತೀಸ್​ಗಡ ಅಬಕಾರಿ ಹಗರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ (ಜು. 18) ಬೆಳಗ್ಗೆ ಚೈತನ್ಯ ಬಘೇಲ್ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಬಕಾರಿ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಚೈತನ್ಯ ಬಘೇಲ್​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಹಗರಣಕ್ಕೆ ಸಂಬಂಧಪಟ್ಟಂತೆ ಹೊಸ ಸಾಕ್ಷ್ಯ ಕಲೆ ಹಾಕಿ ಇಂದು 2ನೇ ಬಾರಿ ಚೈತನ್ಯ ಬಘೇಲ್​ರ ನಿವಾಸ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾರ್ಚ್​ ತಿಂಗಳಲ್ಲೂ ಚೈತನ್ಯ​ಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು.

ಛತ್ತೀಸ್​ಗಡ  ಅಬಕಾರಿ ಹಗರಣ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದ್ದು, ಸಿಂಡಿಕೇಟ್ ಸದಸ್ಯರಿಗೆ 2,100 ಕೋಟಿ ರೂ. ಲಾಭವಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಚೈತನ್ಯ ಬಘೇಲ್ ಹಣ ಪಡೆದಿರುವ ಬಗ್ಗೆ ಶಂಕೆಯಿದೆ ಇಡಿ ತಿಳಿಸಿದೆ,(ಏಜೆನ್ಸೀಸ್).