ನ್ಯೂಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಫೋನ್​​​ಗಳು ಪತ್ತೆ; ಈ ಬಾರಿ ಸಿಕ್ಕಿದ್ದೆಲ್ಲಿ ಗೊತ್ತಾ?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ. ಇತ್ತೀಚೆಗಷ್ಟೇ ಉಗ್ರ ನಜೀರ್ ಹಾಗೂ ಶಂಕಿತ ಉಗ್ರರ ಕಳ್ಳಾಟ ಬಯಲಾಗಿತ್ತು. ಇದೀಗ ಜೈಲಿನಲ್ಲಿ ಮತ್ತೆ ಮೊಬೈಲ್ ಫೋನ್​ಗಳು ಪತ್ತೆಯಾಗಿರುವುದು ತಿಳಿದುಬಂದಿದೆ.

ಜೈಲಾಧಿಕಾರಿಗಳ ತಪಾಸಣೆ ವೇಳೆ ಕೈದಿಗಳ ಕಳ್ಳಾಟ ಬಯಲಾಗಿದೆ. ಕಳೆದ 21ರಂದು ರಾತ್ರಿ ಅಧಿಕಾರಿಗಳು ಜೈಲಿನ ಟವರ್ ಒಂದರ ಆರನೇ ಬ್ಯಾರಕ್ ಅನ್ನು ಧಿಢೀರ್ ತಪಾಸಣೆ ನಡೆಸಿದ್ದು, ತಪಾಸಣೆ ವೇಳೆ ಮೊಬೈಲ್ ಫೋನ್​​​​ಗಳು ಸಿಕ್ಕಿ ಬಿದ್ದಿವೆ.

ಶೌಚಾಲಯದಲ್ಲಿ ಕೈದಿಗಳು ಮೊಬೈಲ್ ಫೋನ್ ಬಚ್ಚಿಟ್ಟಿದ್ದು, ಮೂರು ಮೊಬೈಲ್ ಫೋನ್​​​​​ಗಳನ್ನ ಜೈಲಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಿಲ್ಲುತ್ತಿಲ್ಲ. ಪದೇ ಪದೇ ಮೊಬೈಲ್ ಫೋನ್, ಮಾದಕ ವಸ್ತುಗಳು ಪತ್ತೆಯಾಗುತ್ತಲಿವೆ.

ಪರಪ್ಪನ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೊಬೈಲ್ ಫೋನ್​​​​​ಗಳನ್ನ ಯಾರು ಬಳಕೆ ಮಾಡುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.