MLC 2025:ತೀವ್ರ ರೋಚಕತೆನ್ನುಂಟು ಮಾಡಿದ್ದ ಮೇಜರ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ವಿರುದ್ಧ ಎಂಐ ನ್ಯೂಯಾರ್ಕ್ (MINY) ತಂಡ ಗೆಲುವಿನ ನಗೆ ಬೀರಿದೆ.
ಸೋಮವಾರ(ಜು.14) ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಂ ತಂಡ ಎಂಐ ನ್ಯೂಯಾರ್ಕ್ ತಂಡಕ್ಕೆ ಮೊದಲು ಬ್ಯಾಟಿಂಗ್ ಆಹ್ವಾನಿಸಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್‌ಗಳ ಗುರಿ ನೀಡಿತು.(180/7)
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್, 46 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿದರು. ಅಗ್ರ ಕ್ರಮಾಂಕದಲ್ಲಿ ಡಿ ಕಾಕ್ಗೆ, ಮೋನಂಕ್ ಪಟೇಲ್ 22 ಎಸೆತಗಳಲ್ಲಿ 28 ರನ್‌ಗಳ ಹೊಡೆಯುವ ಮೂಲಕ ಉತ್ತಮ ಆರಂಭ ಒದಗಿಸಲು ನೆರವಾದರು. ಇನ್ನಿಂಗ್ಸ್ ಮಧ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದರು.
181 ರನ್‌ಗಳ ಗುರಿ ಬೆನ್ನತ್ತಿದ ವಾಷಿಂಗ್ಟನ್ ಫ್ರೀಡಂ ತಂಡದ ಆರಂಭ ಉತ್ತಮವಾಗಿರಲಿಲ್ಲ, ಮಿಚೆಲ್ ಓವನ್ ಮೊದಲ ಎಸೆತದಲ್ಲಿಯೇ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರೆ, ಅವರ ನಂತರ ಬಂದ ಆಂಡ್ರೀಸ್ ಗೌಸ್ ಶೂನ್ಯಕ್ಕೆ ಔಟಾದರು. ಇನ್ನೋರ್ವ ಆರಂಭಿಕ ಆಟಗಾರ ರಚಿನ್ ರವೀಂದ್ರ 70(41) ಮತ್ತು ಜ್ಯಾಕ್ ಎಡ್ವರ್ಡ್ಸ್ 33(22) 84 ರನ್‌ಗಳ ಗಳಿಸುವ ಮೂಲಕ ಅದ್ಭುತ ಆಟ ಮುನ್ನೆಡೆಸಿದರು.
ಆದರೆ, 16ನೇ ಓವರ್‌ನಲ್ಲಿ ರವೀಂದ್ರ, ರುಶಿಲ್ ಉಗಾರ್ಕರ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಪಂದ್ಯದ ಗತಿಯನ್ನೇ ಬದಲಾಯಿತು. ಮದ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ 48(34) ಮತ್ತು ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಆಟ ಮುಂದುವೆರಿಸಿದರಾದರೂ ತಂಡವನ್ನು ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಕೊನೆಗೆ 5 ರನ್ಗಳಿಂದ ಪರಾಭವಗೊಂಡಿತು.(175/5)
ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಏಳು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿತ್ತು. ದ್ವಿತೀಯಾರ್ಧದಲ್ಲಿ ಅಚ್ಚರಿಯ ರೀತಿಯಲ್ಲಿ ತಿರುವು ಪಡೆದು ಫೈನಲ್ ಪ್ರವೇಶಿಸಿದ ಎಂಐ ನ್ಯೂಯಾರ್ಕ್ ತಂಡ ಚಾಂಪಿಯನ್ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿದೆ. (ಏಜೆನ್ಸೀಸ್)