ನ್ಯೂಸ್

ಕರೊನಾದಿಂದ ಕಂಗೆಟ್ಟ ಶಾಸಕರಿಗೆ ಸಿಹಿಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ!

arunakunigal

ಬೆಂಗಳೂರು: ಕರೊನಾದಿಂದ ಕಂಗೆಟ್ಟ ಶಾಸಕರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ಶುಕ್ರವಾರ ಸಿಹಿಸುದ್ದಿ ಕೊಟ್ಟಿದ್ದಾರೆ. ಕ್ಷೇತ್ರಗಳ ಅಭಿವೃದ್ಧಿಗೆ ಹಣ ಇಲ್ಲದೆ ಕ್ಷೇತ್ರದತ್ತ ಮುಖ ಮಾಡೋಕೆ ಆಗ್ತಿಲ್ಲ. ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗುದುಕೊಳ್ತಾರೆ ಎಂದು ಅಸಮಾಧಾನ ಹೊರಹಾಕುತ್ತಿದ್ದ ಶಾಸಕರಿಗೆ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಬಿಎಸ್​ವೈ ಅಭಯ ನೀಡಿದರು.

ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿಎಂ, ಮಾರ್ಚ್ ಅಂತ್ಯದೊಳಗೆ ಘೋಷಿತ ಅನುದಾನ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಶೀಘ್ರವೇ ಸೂಕ್ತ ಆದೇಶ ಹೊರಡಿಸಲಾಗುವುದು. ಶೇ.85 ಘೋಷಿತ ಅನುದಾನವನ್ನು ಕೊಡಲು ತೀರ್ಮಾನಿಸಿದ್ದೇನೆ ಎಂದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಶಾಸಕರುಗಳ ಕ್ಷೇತ್ರದ ಅಭಿವೃದ್ಧಿಗೆ ಘೋಷಿಸಿರುವ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ. ಆರ್ಥಿಕ ಇಲಾಖೆಯ ಮೂಲಕ ತಡೆಹಿಡಿಯಲಾದ ಅನುದಾನ ಶೀಘ್ರವೇ ನಿಮ್ಮ ಕೈ ಸೇರಲಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯ ನಡೆಸಿ ಎಂದು ಅಧಿವೇಶನದ ಕೊನೆಯ ದಿನ ಯಡಿಯೂರಪ್ಪ ಭರವಸೆ ನೀಡಿದರು.

ಅನುದಾನ ಇಲ್ಲದೇ ಕ್ಷೇತ್ರದ ಕಡೆ ಹೋಗೋಕೆ ಆಗ್ತಾ ಇಲ್ಲ ಎಂದು ಸದನದಲ್ಲಿ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದರು. ವಿಪಕ್ಷವೂ ಆಕ್ರೋಶ ಹೊರಹಾಕಿತ್ತು. ಇದಕ್ಕೆ ಉತ್ತರಿಸಿದ ಬಿಎಸ್​ವೈ, ಅನುದಾನ ಸಮಸ್ಯೆಗೆ ಮುಕ್ತಿ ನೀಡಿದ್ದರು.