ದಾವಣಗೆರೆ: ಅ.30ರ ರಾತ್ರಿ ಕಾಣೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ 4 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.
ನ್ಯಾಮತಿ ಮತ್ತು ಹೊನ್ನಾಳಿ ಮಧ್ಯೆ ಇರುವ ತುಂಗಾ ಮೇಲ್ಡಂಡೆ ನಾಲೆಯ ನೀರಲ್ಲಿ ಗುರುವಾರ ಕಾರೊಂದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರನ್ನು ಹೊರತೆಗೆಯುತ್ತಿದ್ದಂತೆ ಇದು ಚಂದ್ರಶೇಖರ್ಗೆ ಸೇರಿದ ಕ್ರೆಟಾ ಕಾರು ಎಂಬುದು ಗೊತ್ತಾಗಿದೆ. ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ರ ಮೃತದೇಹ ಸಿಕ್ಕಿದೆ.
ಕಾರಿನ ಹಿಬ್ಬಂದಿ ಸೀಟಿನಲ್ಲಿ ಚಂದ್ರಶೇಖರ್ರ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಮಗನ ಬದುಕಿಲ್ಲ ಎಂದು ತಿಳಿಯುತ್ತಿದ್ದಂತೆ ಶಾಸಕ ರೇಣುಕಾಚಾರ್ಯರು ಕುಸಿದು ಬಿದ್ದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತುಂಗಾ ಮೇಲ್ದಂಡೆ ಮೇಲೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.