ನ್ಯೂಸ್

'ನಾನು ದೆಹಲಿಗೆ ಹೋಗೇ ಇಲ್ಲ.. ಯಡಿಯೂರಪ್ಪ ಅವರೇ ನಮ್ಮ ಸಿಎಂ.. ಬದಲಾಗೋ ಮಾತಿಲ್ಲ'

ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಬದಲಾಗುತ್ತಾರೆ, ಅದಕ್ಕಾಗಿ ಬಿಜೆಪಿಯ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ ಎನ್ನುವ ವಿಚಾರಗಳು ಹರಿದಾಡಿರುವ ಬೆನ್ನಲ್ಲೇ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಈ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ನನ್ನ ಪಾಲು ಇಲ್ಲವೇ ಇಲ್ಲ ಎಂದು ತಿಳಿಸಿದ್ದಾರೆ.

ನಾನು ದೆಹಲಿಗೆ ಕೆಲವು ಶಾಸಕರ ಜತೆ ಹೋಗಿದ್ದೇನೆ ಎಂದು ಹೇಳಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ಸಿಎಂ ಬದಲಾವಣೆ ವಿಚಾರದಲ್ಲಿ ನನ್ನ ಪಾತ್ರ ಇಲ್ಲ. ಯಡಿಯೂರಪ್ಪನವರು ಶಕ್ತಿವಂತರಾಗಿದ್ದಾರೆ. ಅವರೇ ನಮ್ಮ ಮುಖ್ಯಮಂತ್ರಿಗಳು. ನಾನು ನನ್ನ ಸ್ನೇಹಿತರೊಂದಿಗೆ ದೆಹಲಿಗೆ ಹೋಗಿದ್ದೇನೆ ಎಂದು ಹೇಳಲಾಗುತ್ತಿದೆ ಆದರೆ ನಾನು ನನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಇದು ಕರೊನಾ ಸಂದರ್ಭವಾಗಿದ್ದು ಜನರ ಸಮಸ್ಯೆ ಕೇಳಬೇಕು. ಇಂತಹ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ಹೇಗೆ ಬಂತು ಎನ್ನುವುದು ಗೊತ್ತಿಲ್ಲ. ದೆಹಲಿಗೆ ಯಾವ್ಯಾವ ಶಾಸಕರು ಹೋಗಿದ್ದಾರೆ ಎನ್ನುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನನ್ನ ಸ್ನೇಹಿತರು ದೆಹಲಿಗೆ ಹೋದರು ಎನ್ನುವ ಮಾತ್ರಕ್ಕೆ ನಾನೂ ಹೋಗಿದ್ದೆ ಎನ್ನುವುದು ಎಷ್ಟು ಸರಿ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಪ್ರಶ್ನಿಸಿದ್ದಾರೆ.

ಬೆಡ್ ಬುಕಿಂಗ್ ದಂಧೆಯಲ್ಲಿ ನನ್ನ ಆಪ್ತ ಇದ್ದಾನೆ ಎಂದು ವರದಿಯಾಗಿದೆ. ಬೊಮ್ಮನಹಳ್ಳಿಯಲ್ಲಿ ಸಾವಿರಾರು ಜನರು ನನಗೆ ಪರಿಚಯಸ್ಥರಿದ್ದಾರೆ. ಹಾಗಂತ ಅವರ ಬಳಿ ಹೋಗಿ ನಾನು ಇಂತಹ ನೀಚ ಕೆಲಸವನ್ನು ಮಾಡಲು ಹೇಳುತ್ತೀನಾ? ಹಗರಣ ಬಯಲಿದೆ ಬಂದಿದೆ. ಇದೀಗ ಆ ಹಗರಣದಲ್ಲಿ ನಮ್ಮವರೇ ನಮ್ಮನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಅವರು ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡುವಾಗ ಹೇಳಿದ್ದಾರೆ.