ನ್ಯೂಸ್

ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ "ಮಿಸ್​ ವೆನಿಜುವೆಲಾ" ಖ್ಯಾತಿಯ ರೂಪದರ್ಶಿ ಅರಿಯಾನಾ ವಿಯೆರಾ

ಅಮೆರಿಕ: ಅತಿ ಕಿರಿಯ ವಯಸ್ಸಿಗೆ "ಮಿಸ್​ ವೆನಿಜುವೆಲಾ" ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಖ್ಯಾತ ರೂಪದರ್ಶಿ ಅರಿಯಾನಾ ವಿಯೆರಾ ವಿಧಿವಶರಾಗಿದ್ದಾರೆ. ಅವರಿಗೆ 26 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಜುಲೈ 13ರಂದು ಸಂಭವಿಸಿದ ಭೀಕರ ರಸ್ತೆ ಅಪಘಅತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್​ 3ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ಅವರ ತಾಯಿ ವಿವಿಯನ್​ ಓಚೋವಾ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜುಲೈ 13ರಂದು ದಕ್ಷಿಣ ಅಮೆರಿಕದಲ್ಲಿರುವ ಒರ್ಲ್ಯಾಂಡೊದ ಹೆದ್ದಾರಿಯಲ್ಲಿ ಅರಿಯಾನಾ ಸಂಚರಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ನಟಿ, ರೂಪದರ್ಶಿಯಾಗಿರುವ ಅರಿಯಾನಾ ವಿಯೆರಾ 2023ರಲ್ಲಿ "ಮಿಸ್​ ವೆನಿಜುವೆಲಾ" ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.

ವಿಯೆರಾ ಅವರ ಸಾವು ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಎರಡು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸ್ವತಃ ತಮ್ಮ ಅಂತ್ಯೆಕ್ರಿಯೆಯ ಕುರಿತ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದರು.