ನ್ಯೂ ಓರ್ಲಿಯನ್ಸ್: 71ನೇ ಆವೃತ್ತಿಯ ವಿಶ್ವ ಸುಂದರಿ ಪಟ್ಟ ಈ ಬಾರಿ ಯುಎಸ್ ಪಾಲಾಗಿದೆ. ಯುಎಸ್ನ ಆರ್ ಬೊನಿ ಗೇಬ್ರಿಯಲ್ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಂದು (ಜ.15) ಲೂಸಿಯಾನದ ನ್ಯೂ ಓರ್ಲಿಯನ್ಸ್ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿಶ್ವಸುಂದರಿ ಕಾರ್ಯಕ್ರಮದಲ್ಲಿ ನಡೆದಿದೆ.
ಟೆಕ್ಸಾಸ್‌ನ ಫ್ಯಾಷನ್ ಡಿಸೈನರ್, ಮಾಡೆಲ್ ಆಗಿರುವ ಆರ್ ಬೊನಿ ಗೇಬ್ರಿಯಲ್, ಮಿಸ್ ವಿಶ್ವ ಸುಂದರಿ ಕಿರೀಟ ಗೆದ್ದ ಮೊದಲ ಅಮೇರಿಕನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿವಿಧ ದೇಶಗಳು ಸುಮಾರು 90 ಸ್ಪರ್ಧಿಗಳು ಭಾಗವಹಿಸಿದ್ದರು. (ಏಜೆನ್ಸೀಸ್)