Pralhad Joshi 
ನ್ಯೂಸ್

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರಿಗೆ ಕರೊನಾ; ಮನೆಯಲ್ಲೇ ಕ್ವಾರಂಟೈನ್​

ಬೆಂಗಳೂರು: ಈಗಾಗಲೇ ಹಲವು ಶಾಸಕರು, ಸಚಿವರಿಗೆ ಕರೊನಾ ಸೋಂಕು ತಗುಲಿದ್ದು, ಇದೀಗ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರೂ ಸೋಂಕಿಗೆ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ತಮಗೆ ಕೊವಿಡ್​-19 ತಗುಲಿದ್ದನ್ನು ದೃಢಪಡಿಸಿರುವ ಪ್ರಲ್ಹಾದ್ ಜೋಶಿ, ನನಗೆ ಯಾವುದೇ ರೋಗ ಲಕ್ಷಣಗಳೂ ಇಲ್ಲ. ವೈದ್ಯರ ಸಲಹೆಯ ಮೇರೆಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದಿದ್ದಾರೆ.

ಸಚಿವರು ನಿನ್ನೆಯಷ್ಟೇ ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ್​ ಸವದಿ ಸೇರಿ ಇನ್ನೂ ಕೆಲವು ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೂ ತಪಾಸಣೆಗೆ ಒಳಗಾಗುವ ಅಗತ್ಯ ಇದೆ.

ಮೊನ್ನೆ ತಾನೇ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಅವರು ತಮಗೆ ಕರೊನಾ ಸೋಂಕು ತಗುಲಿದ್ದಾಗಿ ತಿಳಿಸಿದ್ದರು. ಅವರೂ ಮನೆಯಲ್ಲೇ ಕ್ವಾರಂಟೈನ್​ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.