ನ್ಯೂಸ್

ನಾಯಿ, ನರಿಗಳು ಅಲ್ಲ… ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ತಿರುಗೇಟು​

ಕಲಬುರ್ಗಿ: ಇಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶಾಸಕ ಮುನಿರತ್ನ ಬಂಧನ ಕಾಂಗ್ರೆಸ್ ಷಡ್ಯಂತ್ರ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಾಡುವ ಅನಿವಾರ್ಯತೆ ಇಲ್ಲ. ಬಿಜೆಪಿಯಂತೆ ನಾವು ಷಡ್ಯಂತ್ರ ರೂಪಿಸಿದ್ರೆ ಜೈಲುಗಳೇ ಸಾಕಾಗಲ್ಲ ಎಂದರು.

"ಷಡ್ಯಂತ್ರ ಸೇಡಿನ ರಾಜಕಾರಣ ಮಾಡೋದು ಬಿಜೆಪಿಯ ಜನ್ಮ ಸಿದ್ದ ಹಕ್ಕು. ಮಾಜಿ ಮಂತ್ರಿಯಾದವರು ಮಹಿಳೆ ಬಗ್ಗೆ ಮಾತನಾಡಿದ್ದಾರೆ. ಸಾವಿರಾರು ಜನರು ನಮ್ಮನ್ನು ಗಮನಿಸುತ್ತಿರುತ್ತಾರೆ. ರಾಜಕಾರಣಿಗಳು ಅಂದಮೇಲೆ ನಮನ್ನು ಜನ ಅನುಕರಣೆ ಮಾಡುವುದು ಸಹಜ. ನಮ್ಮ ಜವಾಬ್ದಾರಿ ಏನು ಅನ್ನೋದನ್ನು ಅರಿತು ಮಾತನಾಡುವುದು ಒಳಿತು. ನಾಯಿ-ನರಿಗಳು ಅಲ್ಲ, ಹೆಣ್ಣು ಮಕ್ಕಳ ಬಗ್ಗೆ ಮಾತಾಡಬೇಕು ಅಂದ್ರೆ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು" ಎಂದು ಹೇಳಿದರು.

ಇನ್ನು ನಾಗಮಂಗಲ ಕೇಸ್ ಕೇರಳಕ್ಕೆ ಲಿಂಕ್ ಇದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ, "ರಾಜ್ಯದಲ್ಲಿ 60 ಸಾವಿರ ಗಣೇಶ ಮಂಡಳಿಗಳಿವೆ‌‌. ಇಂತಹ ಘಟನೆಗಳು ಆಗಬಾರದು. ನಾನು ಯಾವುದೇ ಕೋಮಿಗಾಗಲಿ, ಜಾತಿಗಾಗಲಿ ಸಪೋರ್ಟ್ ಮಾಡೋದಿಲ್ಲ. ಈ ರೀತಿ ಘಟನೆಗಳನ್ನು ನಾವು ಖಂಡಿಸುತ್ತೇವೆ.‌ ಪಕ್ಷಾತೀತವಾಗಿ ಯಾವುದೇ ಕೋಮಿನವರಾಗಲಿ ನಮ್ಮ ಸರ್ಕಾರ ಖಂಡಿತ ಕಠಿಣ ಕ್ರಮಕೈಗೊಳ್ಳುತ್ತದೆ" ಎಂದು ಹೇಳಿದರು.

"ಯಾವುದೇ ಲಿಂಕ್ ಇಲ್ಲ, ಪ್ರೀ ಪ್ಲಾನ್ ಇಲ್ಲ. ದೊಡ್ಡ ಕಥೆ ಕಟ್ಟೋಕೆ ಹೋಗಬೇಡಿ. ಎರಡು ಗುಂಪುಗಳ ನಡುವೆ ಘರ್ಷಣೆ ಆಗಿದೆ. ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ" ಎಂದು ಲಕ್ಷ್ಮಿ ಹೆಬ್ಬಾಳ್ಕರ್​ ಬಿಜೆಪಿ ನಾಯಕರಿಗೆ ಖಡಕ್ ತಿರುಗೇಟು ನೀಡಿದರು.