ಸಾಂದರ್ಭಿಕ ಚಿತ್ರ 
ನ್ಯೂಸ್

Minimum Wages Hike: ಕಾರ್ಮಿಕರಿಗೆ ಉಡುಗೊರೆ ನೀಡಿದ ಕೇಂದ್ರ ಸರ್ಕಾರ: ಕೃಷಿ, ಕೈಗಾರಿಕೆಗಳಲ್ಲಿ ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ಹೆಚ್ಚಳ

Webdesk - Narayanaswamy

ನವದೆಹಲಿ: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ಕೃಷಿ, ಕೈಗಾರಿಕೆ, ಗಣಿಗಾರಿಕೆ, ನಿರ್ಮಾಣ ವಲಯ ಸೇರಿದಂತೆ ಇತರ ಕಾರ್ಮಿಕರಿಗೆ ಕನಿಷ್ಠ ವೇತನ(Minimum Wages Hike) ಹೆಚ್ಚಿಸುವ ಮೂಲಕ ಉಡುಗೊರೆ ನೀಡಿದೆ.

ಕೇಂದ್ರದ ಆದೇಶವು ಕಟ್ಟಡ ನಿರ್ಮಾಣ, ಲೋಡಿಂಗ್ ಮತ್ತು ಅನ್‌ಲೋಡಿಂಗ್, ಭದ್ರತಾ ಸಿಬ್ಬಂದಿ, ಸೆಕ್ಯೂರಿಟಿ, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಅನ್ವಯಿಸಲಿದೆ.

ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ (ಸಿಪಿಐ) ಕಾರ್ಮಿಕರ ಕನಿಷ್ಠ ವೇತನವನ್ನು 2.40 ಅಂಕಗಳಷ್ಟು ಹೆಚ್ಚಿಸಲಾಗಿದೆ. ಹೊಸ ದರದ ಪ್ರಕಾರ, ಕಾರ್ಮಿಕರ ವೇತನವು ದಿನಕ್ಕೆ ಕನಿಷ್ಠ 783 ರೂ. ಅಂದರೆ ಮಾಸಿಕ 20,358 ರೂ. ಆಗಲಿದೆ. ಇದೇ ಸಮಯದಲ್ಲಿ, ವಾಚ್‌ಮೆನ್‌(ಸೆಕ್ಯೂರಿಟಿ)ಗಳಿಗೆ ಕನಿಷ್ಠ ವೇತನ ದರವು ದಿನಕ್ಕೆ 1,035 ರೂ. ಆಗಲಿದೆ.

ಅ.1 ರಿಂದ ಅನ್ವಯ: Minimum Wages Hike

ಹೆಚ್ಚು ನುರಿತ ಮತ್ತು ಶಸ್ತ್ರಾಸ್ತ್ರ ಹೊಂದಿರುವ ವಾಚ್ ಮನ್​ ಮತ್ತು ಗಾರ್ಡ್‌ಗೆ ದಿನದ ವೇತನವು 10,35ರೂ. ಅಥವಾ ತಿಂಗಳಿಗೆ 26,910ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ ಎಂದು ಕೇಂದ್ರ ಕಾರ್ಮಿಕ ಆಯುಕ್ತರ ಅಧಿಸೂಚನೆಯು ತೋರಿಸಿದೆ.

ಸೆಕ್ಟರ್ ವಿಭಾಗಗಳು ಮತ್ತು ವಲಯದ ಮೂಲಕ ಕನಿಷ್ಠ ವೇತನ ದರಗಳ ಮಾಹಿತಿಯು clc.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.