ಈಗಾಗಲೇ ಬಹುಭಾಷಾ ಸಿನಿಮಾ ಪರಿಕಲ್ಪನೆ ವರ್ಕೌಟ್ ಆಗುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಆಗಮಿಸುತ್ತಿವೆ.
ಇದನ್ನೂ ಓದಿ: ಡಾಲಿ ಧನಂಜಯ ‘ಬಡವ ರಾಸ್ಕಲ್’ ಸಿನಿಮಾ ಎಲ್ಲಿಗೆ ಬಂತು…
ಇದೀಗ ಮಲಯಾಳಂನ ಮಿಂಚು ಮುರಳಿ ಸಿನಿಮಾ ಕನ್ನಡದ ಜತೆಗೆ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕನ್ನಡದ ಆ ಟೀಸರ್ ಬಿಡುಗಡೆ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್.
ಮಲಯಾಳಂನಲ್ಲಿ ‘ಮಿನ್ನಾಲ್ ಮುರಳಿ’ ಶೀರ್ಷಿಕೆಯಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ತೋವಿನ್ ಥಾಮಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್ನ ಈ ಚಿತ್ರವನ್ನು ಬಸಿಲ್ ಜೋಸೆಫ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ 5 ಭಾಷೆಗಳ ಟೀಸರ್ ಬಿಡುಗಡೆಯಾಗಿದೆ.
ಮಲಯಾಳಂ ಮತ್ತು ತಮಿಳಿನಲ್ಲಿ ‘ಮಿನ್ನಾಲ್ ಮುರಳಿ’, ಕನ್ನಡಲ್ಲಿ ಮಿಂಚು ಮುರಳಿ, ತೆಲುಗಿನಲ್ಲಿ ಮೆರುಪು ಮುರಳಿ ಮತ್ತು ಹಿಂದಿಯಲ್ಲಿ ಮಿಸ್ಟರ್ ಮುರಳಿಯಾಗಿ ಸಿನಿಮಾ ತಯಾರಾಗಲಿದೆ.