ನ್ಯೂಸ್

500 ಕೋಟಿ ರೂ. ಆಸ್ತಿ ಹೊಂದಿದ 'ಕೋಟ್ಯಾಧಿಪತಿ' ಕಾನ್ ಸ್ಟೇಬಲ್ ನಾಪತ್ತೆ!​​ ಪೊಲೀಸರ ತೀವ್ರ ಶೋಧ

ಮಧ್ಯಪ್ರದೇಶ: ಇಲ್ಲಿನ ಸಾರಿಗೆ ಇಲಾಖೆಯ ಮಾಜಿ ಕಾನ್ ಸ್ಟೇಬಲ್ ಸೌರಭ್ ಶರ್ಮಾ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ನಂತರ ನಾಪತ್ತೆಯಾಗಿದ್ದು, ಅವರು 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಇದೀಗ ಬಹಿರಂಗೊಂಡಿದೆ.

ಇತ್ತೀಚಿಗೆ ಸೌರಭ್ ಶರ್ಮಾ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಬಿಟ್ಟು ಹೋಗಿದ್ದ ವಾಹನದಿಂದ 11 ಕೋಟಿ ರೂ. ನಗದು ಮತ್ತು 52 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳುವುದರೊಂದಿಗೆ ಆರೋಪಿ ಕಾನ್​​ ಸ್ಟೇಬಲ್​ರ ಕೇಸ್​​ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಅಲ್ಲಿನ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ. ಆದರೆ, ಆರೋಪಿ ಕಾನ್ಸ್​ ಸ್ಟೇಬಲ್​ ನಾಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸೌರಭ್ ಶರ್ಮಾ ಯಾರು? ವಿವಾದ ಏನು?

ಗ್ವಾಲಿಯರ್ ನಿವಾಸಿ ಸೌರಭ್ ಶರ್ಮಾ 2015 ರಲ್ಲಿ ತಮ್ಮ ತಂದೆಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ನೇಮಕಗೊಂಡ ನಂತರ ಸಾರಿಗೆ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡಿದರು.

ಕಳೆದ ತಿಂಗಳು, 2025ರ ಡಿಸೆಂಬರ್ 19 ರಂದು ಲೋಕಾಯುಕ್ತ ಪೊಲೀಸರು ಭೋಪಾಲ್‌ನಲ್ಲಿ ಶರ್ಮಾಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ದಾಳಿ ನಡೆಸಿ ಚಿನ್ನ ಮತ್ತು ಬೆಳ್ಳಿಯ ಜೊತೆಗೆ 2.1 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದರು.

ಅದೇ ದಿನ, 'ಪ್ರಾದೇಶಿಕ ಸಾರಿಗೆ ಅಧಿಕಾರಿ' (ಆರ್‌ಟಿಒ) ಎಂಬ ಫಲಕವನ್ನು ಹೊಂದಿರುವ ಇನ್ನೋವಾ ಕಾರು ಭೋಪಾಲ್‌ನ ಹೊರವಲಯದಲ್ಲಿರುವ ಕಾಡಿನಲ್ಲಿ ತ್ಯಜಿಸಲ್ಪಟ್ಟಿರುವುದು ಕಂಡುಬಂದಿದೆ. ಶರ್ಮಾ ಅವರ ಆಪಾದಿತ ಸಹಾಯಕ ಚೇತನ್ ಸಿಂಗ್ ಗೌಡ್ ಎಂಬಾತನ ಹೆಸರಿನಲ್ಲಿ ಇನ್ನೋವಾ ನೋಂದಣಿಯಾಗಿದೆ. ಅಲ್ಲಿಂದ ಆರಂಭವಾದ ಇತ ಆಸ್ತಿಯ ಪತ್ತೆ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ 500 ಕೋಟಿ ರೂ. ತಲುಪಿದೆ.(ಏಜೆನ್ಸೀಸ್​)