ನಾಗಾನ್: ಲಾಕ್ಡೌನ್ ಹಿನ್ನೆಲೆ ವಲಸೆ ಕಾರ್ವಿುಕನೊಬ್ಬ 2,900 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ತನ್ನ ಮನೆ ತಲುಪಿರುವ ಘಟನೆ ಅಸ್ಸಾಂನ ನಾಗಾನ್ನಲ್ಲಿ ನಡೆದಿದೆ.
ಜಾಧವ್ ಗೊಗಯ್ ಗುಜರಾತ್ನ ಕಾರ್ಖಾನೆಯೊಂದರಲ್ಲಿ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಮಾರ್ಚ್ 24ಕ್ಕೆ ಲಾಕ್ಡೌನ್ ಘೊಷಣೆಯಾದ ನಂತರ ಕಾರ್ಖಾನೆ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿತು. ಜಾಧವ್ ಮಾರ್ಚ್ 25ರಂದು ಗುಜರಾತ್ನಿಂದ ಕಾಲ್ನಡಿಗೆಯಲ್ಲಿ ಹೊರಟರು. ಜಾಧವ್ ಇದೀಗ ನಾಗಾನ್ ತಲುಪಿದ್ದು ಆತನನ್ನು ಅಲ್ಲಿನ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಮಾರ್ಗ ಮಧ್ಯೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳ ಸಹಾಯದಿಂದಾಗಿ ತಾನು ಊರಿಗೆ ತಲುಪಿರುವುದಾಗಿ ಜಾಧವ್ ಹೇಳಿದ್ದಾನೆ. ಊರಿಗೆ ಬಾರದೆ ಗುಜರಾತ್ನಲ್ಲೇ ಉಳಿದುಬಿಟ್ಟಿದ್ದರೆ ಊಟವಿಲ್ಲದೆ ಸಾಯಬೇಕಿತ್ತು ಎಂದಿದ್ದಾನೆ.