ನ್ಯೂಸ್

ಬೈಸಿಕಲ್​ನಲ್ಲಿ ಬೆಂಗಳೂರಿನಿಂದ ಒಡಿಶಾದ ಕಟಕ್​ ತಲುಪಿದ ವಲಸೆ ಕಾರ್ಮಿಕ ದಂಪತಿ

ಕಟಕ್​: ಲಾಕ್​ಡೌನ್​ ವಲಸೆ ಕಾರ್ಮಿಕರನ್ನು ಕಾಡಿದಷ್ಟು ಬಹುಶಃ ಬೇರೆಯವನ್ನು ಕಾಡಲಿಲ್ಲ. ಅವರು ತಮ್ಮ ಸ್ವಂತ ಊರಿಗೆ ತೆರಳಲು ಪಟ್ಟ ಕಷ್ಟ ಮಾತ್ರ ಹೇಳತೀರದು.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದೂರದ ಒಡಿಶಾ ಮೂಲದ ಮೂವರು ಬೈಸಿಕಲ್​ ಮೂಲಕ ತಮ್ಮ ಸ್ವಗ್ರಾಮ ತಲುಪಿದ್ದಾರೆ.

ಚಂದನ್​ ಹಾಗೂ ಅವರ ಪತ್ನಿ ಮತ್ತೊಂದು ಬೈಸಿಕಲ್​ನಲ್ಲಿ ಚಂದನ್​ ಸ್ನೇಹಿತ ಜಿನಾ ಕಟಕ್​ ತಲುಪಿದರು. ಕಟಕ್​ನಲ್ಲಿ ಬೈಸಿಕಲ್​ ತುಳಿಯುತ್ತಿರುವುದನ್ನು ನೋಡಿದ ಸ್ಥಳೀಯರು ಸುರಕ್ಷಿತವಾಗಿ ಟ್ರಕ್​ ಮೂಲಕ ಸ್ವಗ್ರಾಮ ತಲುಪುವಂತೆ ಮಾಡಿದ್ದಾರೆ.

ಚಂದನ್​ ಮತ್ತು ಟಪಾನ್​ ಜಿನಾ ಒಡಿಶಾದ ಭದ್ರಾಕ್​ ಜಿಲ್ಲೆಯರು . ಚಂದನ್​ ವಿವಾಹವಾಗಿದ್ದರು. ಮೂವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕರೊನಾ ವೈರಸ್​ ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತು. ಕೆಲಸ ಇಲ್ಲದ ಪರಿಣಾಮ ತಮ್ಮ ಸ್ವಗ್ರಾಮಕ್ಕೆ ತೆರಳಲು ನಿರ್ಧರಿಸಿದರು. ಆದರೆ ಇವರ ಬಳಿ ಹಣ ಇರಲಿಲ್ಲ. ಕೊನೆಗೆ ಬೈಸಿಕಲ್​ ಖರೀದಿಸಿ ಅದರಲ್ಲಿ ಸ್ವಗ್ರಾಮ ತಲುಪಲು ನಿರ್ಧರಿಸಿದರು.

ಚಂದನ್​ ಬೈಸಿಕಲ್​ನಲ್ಲಿ ಪತ್ನಿಯನ್ನು ಕರೆದುಕೊಂಡು ತೆರಳಲು ಮುಂದಾದರು. ಎರಡು ಬೈಸಿಕಲ್​ನಲ್ಲಿ ಮೂವರು ಬೆಂಗಳೂರು ಬಿಟ್ಟು ತೆರಳಿದರು. ಕಟಕ್​ನಲ್ಲಿ ಬೈಸಿಕಲ್​ ತುಳಿಯುತ್ತಿದ್ದ ಚಂದನ್​ ಹಾಗೂ ಜಿನಾ ಅವರನ್ನು ನೋಡಿದ ಸ್ಥಳೀಯರು ಅವರಿಗೆ ಆಹಾರ ನೀಡಿ ನಂತರ ಟ್ರಕ್​ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು. (ಏಜೆನ್ಸೀಸ್​)