ನ್ಯೂಸ್

ಹಾರಾಡುತ್ತಿರುವಾಗಲೇ ಹೊತ್ತಿ ಉರಿದ ವಿಮಾನ; ವಿಡಿಯೋ ವೈರಲ್

ನವದೆಹಲಿ: ಕಾರ್ಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ಅಮೆರಿಕಾದ ಮಿಯಾಮಿಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೈಲಟ್​ ವಿಮಾನವನ್ನಹು ತುರ್ತು ಭೂಸ್ಫರ್ಶ ಮಾಡುವಂತೆ ಹೇಳುತ್ತಿರುವ ಆಡಿಯೋ ವೈರಲ್​​ ಆಗಿದೆ.

ಕಾರ್ಗೊ ವಿಮಾನದ ಎಂಜಿನ್‌ ದೋಷದ ಕಾರಣಕ್ಕೆ ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ತುರ್ತು ಸಂದರ್ಭದ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.