ಜಲಿಸ್ಕೋ: ನಾಪತ್ತೆಯಾಗಿದ್ದವರನ್ನು ಹುಡುಕಲು ಹೋಗಿದ್ದ ಪೊಲೀಸರಿಗೆ ಮನುಷ್ಯರ ಮೃತದೇಹವಿರುವ 45 ಚೀಲಗಳು ದೊರಕಿರುವ ಘಟನೆ ಮೆಕ್ಸಿಕೋದ ಜಲಿಸ್ಕೋ ಎಂಬಲ್ಲಿ ನಡೆದಿದೆ.
ಸ್ಥಳೀಯ ಕಾಲ್ಸೆಂಟರ್ನಲ್ಲಿ ಉದ್ಯೋಗ ಮಾಡುತ್ತಿದ್ದ 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು ಮೇ 20ರಿಂದ 22ರ ನಡುವೆ ನಾಪತ್ತೆಯಾಗಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ವೇಳೆ ಪೊಲೀಸರಿಗೆ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ದೊರಕಿವೆ. ಅನುಮಾನಗೊಂಡ ಪೊಲೀಸರ ಈ ಬ್ಯಾಗ್ಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಪುರುಷ ಹಾಗೂ ಮಹಿಳೆಯರ ಶವಗಳು ದೊರೆತಿವೆ.
ನಾಪತ್ತೆಯಾಗಿದ್ದ 7 ಜನರು ಕಾಲ್ ಸೆಂಟರ್ ಉದ್ಯೋಗಿಯಾಗಿದ್ದು, ಬ್ಯಾಗ್ ದೊರೆತಿರುವ ಪ್ರದೇಶದಲ್ಲಿಯೇ ಕಾಲ್ಸೆಂಟರ್ ಕೂಡ ಪತ್ತೆಯಾಗಿದೆ. ಕಾಣೆಯಾದವರು ಹಾಗೂ ದೊರೆತಿರುವ ಶವಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಂದಾಣಿಕೆ ಕಂಡು ಬಂದಿದೆ.
ಕಾಲ್ ಸೆಂಟರ್ನ ಸಿಬ್ಬಂದಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಿರಬಹುದು. ಈ ವೇಳೆ ಮನಸ್ತಾಪ ಉಂಟಾಗಿ ಏನೋ ಅವಗಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.(ಏಜೆನ್ಸೀಸ್)