Meta apologises for brief removal of PM's selfie video
- ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಮೋದಿ ವಿಡಿಯೋ ಡಿಲೀಟ್
- ಪ್ರಧಾನಿ ಮೋದಿ ಫೇಸ್ಬುಕ್ನಲ್ಲಿ ಕಳೆದ ಗುರುವಾರ ಹಂಚಿಕೊಂಡಿದ್ದ ವಿಡಿಯೋ
- ತಾಂತ್ರಿಕ ದೋಷದಿಂದ ಹೀಗಾಗಿದೆ ಸಾರಿ ಎಂದ ಫೇಸ್ಬುಕ್ ಒಡೆತನದ ಮೆಟಾ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಸೆಲ್ಫಿ ವಿಡಿಯೋ ಫೇಸ್ಬುಕ್ನಲ್ಲಿ ಬ್ಲಾಕ್ ಆಗಿದ್ದ ಬಗ್ಗೆ ಭಾರತ ಸರ್ಕಾರದ ಬಳಿ ಮೆಟಾ ಕ್ಷಮೆ(Meta apologises for brief removal of PM's selfie video govt summons global head) ಕೋರಿದೆ. ಅಲ್ಲದೆ, ಇದಕ್ಕೆ ತಾಂತ್ರಿಕದೋಷ ಕಾರಣ ಎಂದು ಸ್ಪಷ್ಟಪಡಿಸಿದೆ.
ಮೆಟಾ ವಕ್ತಾರ ಹೇಳಿದ್ದೇನು?
ತಪ್ಪಾಗಿ ಅರ್ಥೈಸಿಕೊಂಡು ಪ್ರಧಾನಿ ಮೋದಿ ಅವರ ವಿಡಿಯೋ ಫೇಸ್ಬುಕ್ನಿಂದ ತೆಗೆದುಹಾಕಲಾಗಿತ್ತು. ಆದರೆ, ಸದ್ಯ ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ಕೇಂದ್ರದಿಂದ ಗಂಭೀರ ಪರಿಶೀಲನೆ
ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಫೇಸ್ಬುಕ್ನಿಂದ ವಿಡಿಯೋ ತೆಗೆದುಹಾಕಲು ಕಾರಣವೇನು ಹಾಗೂ ಕೂಲಂಕಷವಾಗಿ ಪರಿಸ್ಥಿತಿಗಳ ಪರಿಶೀಲನೆ ನಡೆಸಲಾಗುತ್ತದೆ. . ಈ ಕುರಿತು ವಿವರಣೆ ನೀಡಲು ಮೆಟಾ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕ ಬಗ್ಗಾ ಕಿಡಿ
ಫೇಸ್ಬುಕ್ ಸಂಸ್ಥೆ ಭಾರತದ ಡಿಜಿಟಲ್ ಸಾರ್ವಭೌಮತ್ವ ಹಾಗೂ ಪ್ರಕಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದೆ. ಫೇಸ್ಬುಕ್ ತನ್ನ ಎಲ್ಲ ಮಿತಿ ಮೀರಿ, ಪ್ರಧಾನಿ ಮೋದಿ ಅವರ ವಿಡಿಯೋವನ್ನು ಭಾರತೀಯರೆ ನೋಡದಂತೆ ತಡೆದಿದೆ. ಈ ವಿದೇಶಿ ವೇದಿಕೆಗೆ ಅಧಿಕಾರ ಕೊಟ್ಟವರು ಯಾರು? ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದರು.
ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಯನ್ನು ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ ಪಟ್ಟು ಹಿಡಿದಿತ್ತು. ಜುಲೈ 20ರಂದು ಸಂಸತ್ ಚಲೋ ನಡೆಸಿತ್ತು. ಈ ವೇಳೆ ಸಾಕಷ್ಟು ಜನ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೂಲಂಕಷವಾಗಿ ಹಲ್ಲೆ ಮಾಡಿದ್ದರು. ಈ ವಿರುದ್ಧ ನಟ-ನಟಿಯರು, ಗಾಯಕರು, ಸಾಹಿತಿಗಳು ಕಿಡಿಕಾರಿದ್ದರು.
ವಿಡಿಯೋದಲ್ಲಿ ಏನಿತ್ತು?
ಆ ಬೆನ್ನಲ್ಲೇ ಪ್ರಧಾನಿ ಮೋದಿ ಅವರು, ಪೇಪರ್ ಸೋರಿಕೆ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರವು ಕಠಿಣ ಕ್ರಮಗಳನ್ನು ಘೋಷಿಸಲಿದೆ. ವಿದ್ಯಾರ್ಥಿ ಪರ ನಮ್ಮ ಸರ್ಕಾರ ಎನ್ನುವ ಸುಮಾರು 3 ನಿಮಿಷಗಳ ಈ ವೀಡಿಯೊದಲ್ಲಿ, ಪೇಪರ್ ಸೋರಿಕೆಗಳು ಮತ್ತು ಪರೀಕ್ಷಾ ಅಕ್ರಮಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು.
ಸ್ನೇಹಿತರೆ ನೀಟ್ ಪೇಪರ್ ಲೀಕ್ ಆಗಿರುವ ವಿಚಾರ ಸಾಮಾನ್ಯವಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ದುಃಖವಾಗಿದೆ. ಇದಕ್ಕಾಗಿ ನಾವು ಎರಡು ತಿಂಗಳಿಂದ ಸಾಕಷ್ಟು ಕ್ರಮ ತೆಗೆದದುಕೊಂಡಿದ್ದೇವೆ. ತಪ್ಪಿತಸ್ಥರನ್ನು ಬಂಧಿಸಲಾಗಿದೆ ವಿದ್ಯಾರ್ಥಿಗಳು ಒಂದೇ ಒಂದು ವರ್ಷವನ್ನು ವ್ಯರ್ಥ ಮಾಡದಂತೆ ನೋಡಿಕೊಳ್ಳುವುದು ನಮ್ಮ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ತಕ್ಷಣವೇ ಪರೀಕ್ಷೆಗಳನ್ನು ನಡೆಸುವುದು ಬಹಳ ಮುಖ್ಯವಾಗಿತ್ತು ಎಂದು ಮಾತನಾಡಿದ್ದರು.
40 ಸೆಕೆಂಡುಗಳ ಆ ತುಣುಕಿನಲ್ಲಿ ಅವರು, ಧನ್ಯವಾದಗಳು ಸ್ನೇಹಿತರೇ... ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಮುಂದುವರಿಯುತ್ತದೆ ಮತ್ತು ನಮ್ಮ ಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ ಹಾಗೂ ಹೆಚ್ಚು ಸಕ್ರಿಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮಾತನಾಡಿದ್ದರು. ಝೆನ್ ಜಿಗಳಿಗೆ ಅವರ ಮಾದರಿಯಲ್ಲಿಯೇ ತಲುಪಿಸಬೇಕಾಗಿದ್ದ ಈ ವಿಡಿಯೋ 24 ಗಂಟೆಯಲ್ಲಿ ಸಾಕಷ್ಟು ವೈರಲ್ ಆಗಿತ್ತು.30.3 ಕೋಟಿ ಜನರು ವಿಡಿಯೋ ನೋಡಿದ್ದರು. ಇದು ವಿಶ್ವದ ಮಟ್ಟದಲ್ಲಿಯೇ ದಾಖಲೆ ಬರೆದಿತ್ತು, (ಏಜೆನ್ಸೀಸ್).