ಮಹಾರಾಷ್ಟ್ರ: ಪ್ರೀತಿ ಮಾಡಲು ಹೃದಯವಿದ್ದರೆ ಸಾಕು ವಯಸ್ಸಿನ ಅಂತರವಿಲ್ಲ ಎನ್ನುವುದಕ್ಕೆ ಜೋಡಿಯೊಂದು ಸಾಕ್ಷಿಯಾಗಿದೆ. 75 ವರ್ಷದ ವೃದ್ಧ, 70 ವರ್ಷದ ವೃದ್ಧೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕವಾಗಿ ಒಬ್ಬರಿಗೊಬ್ಬರು ಆಸರೆಯಾಗಿದ್ದಾರೆ.
75 ವರ್ಷದ ವೃದ್ಧ, 70 ವರ್ಷದ ವೃದ್ಧೆ ಒಂದು ವೃದ್ಧಾಶ್ರಮದಲ್ಲಿ ಜೀವಿಸುತ್ತಿದ್ದರು. ಅಲ್ಲಿಯೇ ಇಬ್ಬರಿಗೂ ಪರಿಚಯವಾಗಿತ್ತು, ವೃದ್ಧಾಶ್ರಮದಲ್ಲಿದ್ದ ಎಲ್ಲರೂ ಸೇರಿ ವೃದ್ಧ ಜೋಡಿಗೆ ಕುಟುಂಬ ಸದಸ್ಯರಾಗಿ ಮದುವೆ ಮಾಡಿಸಿದ್ದಾರೆ. ಈ ಅಪರೂಪದ ಮದುವೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಘಟನೆ ನಡೆದಿದೆ.
ಇಬ್ಬರ ಅಭಿಪ್ರಾಯ, ಅಭಿರುಚಿ ಹೊಂದಾಣಿಕೆಯಾಗಿದ್ದು, ಈ ನಡುವೆ ಒಟ್ಟಿಗೆ ಜೀವನ ನಡೆಸಬೇಕು ಎಂದು ವೃದ್ಧ ದಂಪತಿ ನಿರ್ಧರಿಸಿದ್ದರು. ತಮ್ಮ ಪ್ರೀತಿಯ ವಿಚಾರವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದರು. ವೃದ್ಧಾಶ್ರಮದಲ್ಲಿದ್ದವರು ಹಾಗೂ ನಿರ್ವಹಕರು ಕೂಡ ಇದುವರೆಗೂ ಒಂಟಿಯಾಗಿ ಜೀವಿಸಿದ್ದ ಇಬ್ಬರು ವೃದ್ಧಾಪ್ಯದಲ್ಲಿಯಾದರೂ ಒಂದಾಗಿ ಜೀವನ ನಡೆಸಲಿ ಅಂತ ಹೇಳಿದ್ದಾರೆ. ವೃದ್ಧಾಶ್ರಮದ ನಿರ್ವಹಕರೊಂದಿಗೆ ಸೇರಿ ಎಲ್ಲರೂ ಅದ್ದೂರಿಯಾಗಿ ಇಬ್ಬರ ಮದುವೆ ಮಾಡಿಸಿದ್ದಾರೆ. ಇಬ್ಬರ ಮದುವೆ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.